ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದ್ಮಪ್ರಿಯಾ ಪ್ರಕರಣ: ಅತುಲ್ ಬಂಧನ  Search similar articles
NRB
ಪದ್ಮಪ್ರಿಯಾ ಸಾವಿನ ಪ್ರಕರಣದ ಪ್ರಮುಖ ಸಾಕ್ಷಿದಾರರನೆಂದು ಗುರುತಿಸಲಾಗಿರುವ ಇಂಜಿನಿಯರ್ ಅತುಲ್ ರಾವ್ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಮತ್ತೆ ಹೊಸ ತಿರುವು ಪಡೆದುಕೊಂಡಿದೆ.

ಶಾಸಕ ರಘುಪತಿ ಭಟ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ಅತುಲ್‌ನನ್ನು ಬಂಧಿಸಿದ್ದು, ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇತ್ತೀಚೆಗಷ್ಟೇ ಅತುಲ್ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಅವರನ್ನು ಕುಟುಂಬದ ವಶಕ್ಕೊಪ್ಪಿಸಿದ್ದರು. ಆ ಸಂದರ್ಭದಲ್ಲಿ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅತುಲ್‌ನ್ನು ಮತ್ತೆ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆದರೆ ಈಗ ರಘುಪತಿ ಭಟ್ ದೂರಿನ ಹಿನ್ನೆಲೆಯಲ್ಲಿ ಮತ್ತೆ ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸೋಮವಾರ ನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು, ಜನರ ಮೇಲಿನ ವಿಶ್ವಾಸ ಉಳಿಸಿಕೊಳ್ಳಬೇಕಾದರೆ ಶಾಸಕ ರಘುಪತಿ ಭಟ್ ಅವರೇ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಘುಪತಿ ಭಟ್ ಹಾಗೂ ಅತುಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಸಿದ್ದಾರೆ.
ಮತ್ತಷ್ಟು
ಅಜ್ಞಾತ ಸ್ಥಳದಲ್ಲಿ ಡೇರಾ ಸಚ್ಚಾ
ರಸಗೊಬ್ಬರ: ಕೇಂದ್ರ ಮೇಲೆ ಗೂಬೆ ಕೂರಿಸಿದ ಬಿಜೆಪಿ
ಡೇರಾ ಸಚ್ಚಾ ನಗರಕ್ಕೆ ಆಗಮನ
ಪ್ರಯಾಣದರ ಹೆಚ್ಚಳವಿಲ್ಲ: ಅಶೋಕ್
ಜಂಟಿ ಸದನ ಸಮಿತಿಗೆ ಖರ್ಗೆ ಆಗ್ರಹ
ಬಜೆಟ್‌ನಲ್ಲಿ ತೆರಿಗೆ ಹೊರೆ ಇಲ್ಲ: ಯಡಿಯೂರಪ್ಪ