ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದನದಲ್ಲಿ ಮೊಳಗಿದ ಗೋಲಿಬಾರ್  Search similar articles
NRB
ರೈತರ ಆತ್ಮಹತ್ಯೆ, ಹಾವೇರಿಯಲ್ಲಿನ ಗೋಲಿಬಾರ್ ಘಟನೆ ಹಾಗೂ ಪದ್ಮಪ್ರಿಯಾ ಸಾವಿನ ಪ್ರಕರಣದಲ್ಲಿ ರಾಜ್ಯ ಸರಕಾರವು ನಿರ್ಲಕ್ಷ್ಯ ತೋರಿದೆ ಎಂದು ಆಪಾದಿಸಿ ಪ್ರತಿಪಕ್ಷಗಳು ಸದನ ಪ್ರಾರಂಭವಾಗುತ್ತಿದ್ದಂತೆ ಗದ್ದಲ ಪ್ರಾರಂಭಿಸಿದವು.

ಸೋಮವಾರ ಸದನದಲ್ಲಿ ಸಂತಾಪ ಸೂಚನಾ ನಿರ್ಣಯದ ಬಳಿಕ ಎದ್ದು ನಿಂತ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದ ರೈತರ ಮೇಲೆ ನಡೆಸಿದ ಗೋಲಿಬಾರ್ ಖಂಡನೀಯ. ಹಾಗಾಗಿ ಮಹತ್ವದ ಈ ಸರಕಾರದ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಖರ್ಗೆ ಮಾತಿಗೆ ಧ್ವನಿಗೂಡಿಸಿದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ರಸಗೊಬ್ಬರದ ಚರ್ಚೆ ಅಗತ್ಯವಿದ್ದು, ಉಳಿದ ಚರ್ಚೆಗಳನ್ನು ಬದಿಗೊತ್ತಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕೆಂದು ತಿಳಿಸಿದರು.

ಆದರೆ, ಈ ವಿಷಯವನ್ನು ಚರ್ಚಿಸುವ ಅವಕಾಶವನ್ನು ತಿರಸ್ಕರಿಸಿದ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರು ನಿಯಮಾವಳಿ 69ರ ಪ್ರಕಾರ ಚರ್ಚೆಗೆ ಅವಕಾಶ ಕಲ್ಪಿಸಿದರು. ರಾಜ್ಯಪಾಲರು ಮಾಡಿದ ಭಾಷಣದ ಮೇರೆಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಈ ವಿಚಾರಗಳನ್ನೆಲ್ಲಾ ಪ್ರಸ್ತಾಪಿಸಬಹುದಾಗಿ ಸಭಾಧ್ಯಕ್ಷರು ಸದನದಲ್ಲಿ ತಿಳಿಸಿದರು.

ಜೆಡಿಎಸ್ ಶಾಸಕಾಂಗ ನಾಯಕನಾಗಿ ಕುಮಾರಸ್ವಾಮಿ
ಅಧಿವೇಶನಕ್ಕೂ ಮೊದಲು ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ವಿಧಾನಸಭೆಯ ಜೆಡಿಎಸ್ ನಾಯಕನಾಗಿ ಎಚ್.ಡಿ. ಕುಮಾರಸ್ವಾಮಿ ಆಯ್ಕೆಗೊಂಡಿದ್ದಾರೆ. ಹಾಗೆಯೇ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಎಂ.ಸಿ. ನಾಣಯ್ಯ ನೇಮಕಗೊಂಡಿದ್ದಾರೆ.

ಎಚ್.ಕೆ. ಪಾಟೀಲರು ರಾಜೀನಾಮೆ ನೀಡಿ ತೆರವಾಗಿರುವ ವಿಧಾನಪರಿಷತ್ ವಿರೋಧ ಪಕ್ಷದ ಹಂಗಾಮಿ ನಾಯಕರಾಗಿ ಕಾಂಗ್ರೆಸ್‌ನ ವೀರಣ್ಣ ಮತ್ತಿಗಟ್ಟಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನೇಮಕ ಮಾಡಲಾಯಿತು.
ಮತ್ತಷ್ಟು
ಪದ್ಮಪ್ರಿಯಾ ಪ್ರಕರಣ: ಅತುಲ್ ಬಂಧನ
ಅಜ್ಞಾತ ಸ್ಥಳದಲ್ಲಿ ಡೇರಾ ಸಚ್ಚಾ
ರಸಗೊಬ್ಬರ: ಕೇಂದ್ರ ಮೇಲೆ ಗೂಬೆ ಕೂರಿಸಿದ ಬಿಜೆಪಿ
ಡೇರಾ ಸಚ್ಚಾ ನಗರಕ್ಕೆ ಆಗಮನ
ಪ್ರಯಾಣದರ ಹೆಚ್ಚಳವಿಲ್ಲ: ಅಶೋಕ್
ಜಂಟಿ ಸದನ ಸಮಿತಿಗೆ ಖರ್ಗೆ ಆಗ್ರಹ