ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದನದಲ್ಲಿ ಮುಗಿಯದ ರಸಗೊಬ್ಬರ ಗಲಾಟೆ  Search similar articles
ರಾಜ್ಯದೆಲ್ಲೆಡೆ ಎದ್ದಿರುವ ರಸಗೊಬ್ಬರದ ಗಲಾಟೆಯು ಸದನದಲ್ಲಿ ಮಂಗಳವಾರ ಕೂಡ ಮುಂದುವರೆದಿದ್ದು, ಸರಕಾರ ಉತ್ತರ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ಇಂದು ಸದನ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ನಾಯಕರು, ಹಾವೇರಿಯಲ್ಲಿನ ಗೋಲಿಬಾರ್ ಘಟನೆ ಹಾಗೂ ರಸಗೊಬ್ಬರ ಅಭಾವದಿಂದಾಗಿ ರೈತರು ಕಂಗೆಟ್ಟಿದ್ದಾರೆ. ಆದರೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಈ ಬಗ್ಗೆ ಸರ್ಕಾರದ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟೀಕರಣ ನೀಡಬೇಕೆಂದು ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ಗಲಾಟೆ ಪ್ರಾರಂಭಿಸಿದರು.

ಈ ಬಗೆಗಿನ ಚರ್ಚೆಯನ್ನು ಸಭಾಧ್ಯಕ್ಷರು ನಿಯಮಾವಳಿ 69ರ ಪ್ರಕಾರ ನಡೆಸುತ್ತಿದ್ದಾರೆ. ರಸಗೊಬ್ಬರ ಸಮಸ್ಯೆ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಸರ್ಕಾರದ ನಿಲುವಿನ ಕುರಿತು ಮುಖ್ಯಮಂತ್ರಿಗಳು ಇಂದು ಸಂಜೆಯ ವೇಳೆಗೆ ಸದನದಲ್ಲಿ ಉತ್ತರ ನೀಡುವ ಸಾಧ್ಯತೆಗಳಿವೆ.
ಮತ್ತಷ್ಟು
ಗೋಲಿಬಾರ್‌ಗೆ ಬಿಜೆಪಿ ಕಾರಣ: ಕುಮಾರಸ್ವಾಮಿ
ಅನನುಭವಿ ಮುಖ್ಯಮಂತ್ರಿ: ದೇವೇಗೌಡ
ಸದನದಲ್ಲಿ ಮೊಳಗಿದ ಗೋಲಿಬಾರ್
ಪದ್ಮಪ್ರಿಯಾ ಪ್ರಕರಣ: ಅತುಲ್ ಬಂಧನ
ಅಜ್ಞಾತ ಸ್ಥಳದಲ್ಲಿ ಡೇರಾ ಸಚ್ಚಾ
ರಸಗೊಬ್ಬರ: ಕೇಂದ್ರ ಮೇಲೆ ಗೂಬೆ ಕೂರಿಸಿದ ಬಿಜೆಪಿ