ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ: ಸರ್ವಪಕ್ಷ ನಿಯೋಗಕ್ಕೆ ಈಶ್ವರಪ್ಪ ಸಲಹೆ  Search similar articles
ಸಮರ್ಪಕ ರೀತಿಯಲ್ಲಿ ರೈತರಿಗೆ ರಸಗೊಬ್ಬರ ಪೂರೈಸುವಂತೆ ಎಲ್ಲರೂ ಒಗ್ಗಟ್ಟಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕೆಂದು ಇಂಧನ ಸಚಿವ ಈಶ್ವರಪ್ಪ ಸಲಹೆ ಮಾಡಿದ್ದಾರೆ.

ವಿಧಾನಸಭಾ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಡೆದಿರುವ ರಸಗೊಬ್ಬರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ವಪಕ್ಷಗಳ ನಿಯೋಗವೊಂದನ್ನು ದೆಹಲಿಗೆ ಕಳಿಸಬೇಕೆಂದು ಎಂದು ತಿಳಿಸಿದರು.

ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ 1.40 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯಕ್ಕೆ ಕಳುಹಿಸುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಕೇಂದ್ರದಿಂದ 70 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಮಾತ್ರ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಬೇಕೆಂದು ಅವರು ಸಲಹೆ ಮಾಡಿದರು.

ಮೇಲ್ಮನೆಯಲ್ಲೂ ರಸಗೊಬ್ಬರ ಗಲಾಟೆ
ರಸಗೊಬ್ಬರ ವಿವಾದ ಮತ್ತು ರೈತರ ಆತ್ಮಹತ್ಯೆ ಮೇಲ್ಮನೆಯಲ್ಲೂ ಪ್ರತಿಧ್ವನಿಸಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪ್ರತಿಪಕ್ಷ ನಾಯಕ ವೀರಣ್ಣ ಮತ್ತಿಗಟ್ಟಿ, ರೈತರ ಮೇಲಿನ ಗೋಲಿಬಾರ್ ಹಾಗೂ ರೈತರ ಸರಣಿ ಆತ್ಮಹತ್ಯೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಹಿರಿಯ ಸಚಿವ ಬಸವರಾಜ್ ಹೊರಟ್ಟಿ, ರಸಗೊಬ್ಬರ ಗಲಾಟೆಯಲ್ಲಿ ಅಮಾಯಕ ರೈತರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕೂಡಲೇ ಅಂತವರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಮತ್ತಷ್ಟು
ಪಿ.ಜಿ.ಆರ್ ಸಿಂಧ್ಯಾಗೆ ಗೇಟ್ ಪಾಸ್!
ಅತುಲ್ 6 ದಿನ ಪೊಲೀಸ್ ವಶಕ್ಕೆ
ವಿಶೇಷ ಅಧಿವೇಶನಕ್ಕೆ ಕಾಶೆಂಪುರ್ ಆಗ್ರಹ
ಬಿಜೆಪಿಗೆ ಸಿದ್ದು ಅಗತ್ಯವಿಲ್ಲ: ಸದಾನಂದಗೌಡ
ಸದನದಲ್ಲಿ ಮುಗಿಯದ ರಸಗೊಬ್ಬರ ಗಲಾಟೆ
ಗೋಲಿಬಾರ್‌ಗೆ ಬಿಜೆಪಿ ಕಾರಣ: ಕುಮಾರಸ್ವಾಮಿ