ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಗಲುಗಳ್ಳರ ಬಂಧನ: 22 ಲಕ್ಷ ಮೌಲ್ಯದ ವಸ್ತು ವಶ  Search similar articles
ಬೆಂಗಳೂರು: ಚಿಕ್ಕಪೇಟೆ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಸರಣಿಗಳ್ಳತನ ಮಾಡುತ್ತಿದ್ದ ಐವರನ್ನು ಚಿಕ್ಕಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 22 ಲಕ್ಷ ರೂ. ಮೌಲ್ಯದ ಒಂದೂ ಕಾಲು ಕೆಜಿ ಚಿನ್ನಾಭರಣ, 4ಕೆಜಿ ಬೆಳ್ಳಿ ಸಾಮಾನು, ಲ್ಯಾಪ್‌ಟಾಪ್, ಎಲ್ಸಿಡಿ ಟಿವಿ, ಹ್ಯಾಂಡಿ ಕ್ಯಾಮೆರಾ, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರು ಆಜಾದ್ ನಗರದ ಇಮ್ರಾನ್ ಖಾನ್, ಅಸ್ಲಂ, ಗೋರಿ ಪಾಳ್ಯದ ಜಾಫರ್, ವಾಲ್ಮೀಕಿನಗರದ ಫಯಾಜ್ ಹಾಗೂ ವಾಝಿ ಪಾಷ ಎಂದು ಗುರುತಿಸಲಾಗಿದ್ದು, ಇವರು ಸುಮಾರು 20 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಬಹುಮಹಡಿ ಕಟ್ಟಡದ ಮನೆಗಳಿಗೆ ಹೋಗಿ ವಿಳಾಸ ಕೇಳುವ ನೆಪದಲ್ಲಿ ಆ ಮನೆಗಳನ್ನು ಗುರುತಿಸಿ ಯಾರು ಇಲ್ಲದ ಸಮಯದಲ್ಲಿ ಮನೆ ಹೊಕ್ಕು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಕಳೆದ ಎರಡು ತಿಂಗಳಿಂದ ಹಗಲು ಕನ್ನ ಪ್ರಕರಣಗಳು ಹೆಚ್ಚುತ್ತಿದ್ದ ಕಾರಣ ಪೊಲೀಸರು ಕಳ್ಳರನ್ನು ಬಂಧಿಸಲು ತೀವ್ರ ಶೋಧ ನಡೆಸಿದ್ದರು.
ಮತ್ತಷ್ಟು
ರಸಗೊಬ್ಬರ: ಸರ್ವಪಕ್ಷ ನಿಯೋಗಕ್ಕೆ ಈಶ್ವರಪ್ಪ ಸಲಹೆ
ಪಿ.ಜಿ.ಆರ್ ಸಿಂಧ್ಯಾಗೆ ಗೇಟ್ ಪಾಸ್!
ಅತುಲ್ 6 ದಿನ ಪೊಲೀಸ್ ವಶಕ್ಕೆ
ವಿಶೇಷ ಅಧಿವೇಶನಕ್ಕೆ ಕಾಶೆಂಪುರ್ ಆಗ್ರಹ
ಬಿಜೆಪಿಗೆ ಸಿದ್ದು ಅಗತ್ಯವಿಲ್ಲ: ಸದಾನಂದಗೌಡ
ಸದನದಲ್ಲಿ ಮುಗಿಯದ ರಸಗೊಬ್ಬರ ಗಲಾಟೆ