ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ ರಾಷ್ಟ್ರೀಯ ಸಮಸ್ಯೆ: ಸಿಎಂ  Search similar articles
ರಾಜ್ಯದಲ್ಲಿನ ರಸಗೊಬ್ಬರ ಕೊರತೆ ಸಮಸ್ಯೆ ಒಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು, ಇದಕ್ಕೆ ಕೇಂದ್ರ ಸರಕಾರವೇ ನಾಯಕತ್ವ ವಹಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ರಸಗೊಬ್ಬರದ ಅಭಾವ ಹಾಗೂ ಅದಕ್ಕಾಗಿ ನಡೆದ ಗೋಲಿಬಾರ್ ಕುರಿತು ಜಂಟಿ ಸದನ ಸಮಿತಿ ರಚಿಸುವ ಪ್ರತಿಪಕ್ಷಗಳ ಆಗ್ರಹವನ್ನು ತಳ್ಳಿ ಹಾಕಿದ ಅವರು, ರೈತರ ಕ್ಷಮೆ ಕೇಳಬೇಕಾಗಿರುವುದು ಪ್ರತಿಪಕ್ಷಗಳೇ ಹೊರತು ಸರಕಾರವಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಹೋದದ್ದರಿಂದ ಹಾಗೂ ರಾಜ್ಯಪಾಲರ ಆಡಳಿತಾವಧಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಇದ್ದುದರಿಂದ ರಾಜ್ಯದಲ್ಲಿ ಗೊಂದಲ ಏರ್ಪಟ್ಟು ರೈತರು ಬೀದಿಗಿಳಿಯುವಂತಾಯಿತು ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ರೈತರ ಸಾವು ತಮಗೆ ದುಃಖ ತಂದಿದೆ ಎಂದು ಭಾವುಕರಾಗಿ ನುಡಿದ ಯಡಿಯೂರಪ್ಪನವರು, ರೈತರ ನೆಮ್ಮದಿಯ ಜೀವನಕ್ಕೆ ಬಿಜೆಪಿ ಸರಕಾರ ಬದ್ಧವಾಗಿರುತ್ತದೆ ಎಂದು ತಿಳಿಸಿದರು.

ಕೃಷಿಯನ್ನು ಲಾಭದಾಯಕವನ್ನಾಗಿ ರೂಪಿಸುವ ಅಗತ್ಯವಿದೆ. ಇದಕ್ಕಾಗಿ ಸರಕಾರ ಮುಂದಿನ ದಿನಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಿದ್ದು, ರೈತರ ಸಮಸ್ಯೆಗಳ ಕುರಿತು ರೈತರ ಮುಖಂಡರ ಜೊತೆ ಚರ್ಚೆ ನಡೆಸಲು ಇದೇ 30ರಂದು ವಿಧಾನಸೌಧದಲ್ಲಿ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದರು.
ಮತ್ತಷ್ಟು
ಏರ್ಪೋರ್ಟ್ ಟ್ಯಾಕ್ಸಿಗೆ ಪಾದಚಾರಿ ಬಲಿ
ಸಿಂಧ್ಯಾರ ಮುಂದಿನ ದಾರಿ ಯಾವುದು?
ಲೋಕಸಭಾ ಆಖಾಡಕ್ಕೆ ಖರ್ಗೆ?
ಹಗಲುಗಳ್ಳರ ಬಂಧನ: 22 ಲಕ್ಷ ಮೌಲ್ಯದ ವಸ್ತು ವಶ
ರಸಗೊಬ್ಬರ: ಸರ್ವಪಕ್ಷ ನಿಯೋಗಕ್ಕೆ ಈಶ್ವರಪ್ಪ ಸಲಹೆ
ಪಿ.ಜಿ.ಆರ್ ಸಿಂಧ್ಯಾಗೆ ಗೇಟ್ ಪಾಸ್!