ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಳ್ಳಿ ಹಕ್ಕಿಯ ಹಾಡು ಇಂಗ್ಲೀಷ್‌ಗೆ  Search similar articles
ವಿವಾದಾತ್ಮಕ ಕೃತಿ ಹಳ್ಳಿ ಹಕ್ಕಿಯ ಹಾಡು ಆತ್ಮಕಥನ ಈಗ ಇಂಗ್ಲಿಷ್ ಭಾಷೆಗೆ ಅನುವಾದಗೊಳ್ಳುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಸಚಿವ ಹಾಗೂ ಕೃತಿಯ ಕತೃ್ ಎಚ್.ವಿಶ್ವನಾಥ್, ಹಳ್ಳಿಯ ಹಕ್ಕಿಯ ಹಾಡಿನ ಕನ್ನಡ ಇಂಗ್ಲಿಷ್ ಆವೃತ್ತಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸ್ತವವನ್ನು ಎಂದೂ ಮುಚ್ಚಿಡುವವನು ನಾನಲ್ಲ. ಹಾಗಾಗಿ ನಾನು ವಿವಾದಾಸ್ಪದವಾಗಿಯೇ ಜನತೆಯಲ್ಲಿ ಗುರುತಿಸಿಕೊಂಡಿದ್ದೇನೆ. ಕೇವಲ ನನ್ನೊಬ್ಬನ ಆತ್ಮಕಥನ ಬರೆದರೆ ಅದು ಏಕಪಾತ್ರಾಭಿನಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಜೊತೆಯಲ್ಲಿ ಕಳೆದ ಕೆಲವು ಕ್ಷಣಗಳನ್ನು ವಿವರಿಸಿದ್ದೇನೆ. ಶೀಘ್ರವೇ ಆತ್ಮಕಥನದ ಎರಡನೇ ಆವೃತ್ತಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಶಾಸಕರ ಕರ್ತವ್ಯದ ಕುರಿತು ಇನ್ನೊಂದು ಕೃತಿ
ಶಾಸಕರಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕು. ಇದಕ್ಕಾಗಿ ತರಬೇತಿ ಹಾಗೂ ಸಂಸ್ಥೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರ ಕರ್ತವ್ಯಗಳೇನು ಎಂಬುದರ ಕುರಿತಂತೆ ತಾವು ಇನ್ನೊಂದು ಕೃತಿ ಬರೆಯುವುದಾಗಿ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಹೊಂದಾಣಿಕೆ ಮಾಡಿಯಾಗಿದೆ. ಈಗ ಪ್ರಶ್ನೆ ಮಾಡುವುದರಲ್ಲಿ ಅರ್ಥವಿಲ್ಲ. ಈ ಮೈತ್ರಿ ಮುಂದಿನ ಲೋಕಸಭಾ ಚುನಾವಣೆವರೆಗೂ ಮುಂದುವರಿಯುವ ವಿಶ್ವಾಸ ತಮಗಿಲ್ಲ ಎಂದು ತಿಳಿಸಿದರು.
ಮತ್ತಷ್ಟು
ರಸಗೊಬ್ಬರ ಧರಣಿಯೊಂದಿಗೆ ಕೊನೆಗೊಂಡ ಅಧಿವೇಶನ
ಎಸ್‌ಐ ಅನಿಲ್ ಕುಮಾರ್ ಬಂಧನ
ಗದಗ: ಪ್ರಶ್ನೆ ಪತ್ರಿಕೆ ಬಯಲು
ವಿಧಾನಸಭಾ ಅಧಿವೇಶನಕ್ಕೆ ಇಂದು ತೆರೆ
ರಸಗೊಬ್ಬರ ರಾಷ್ಟ್ರೀಯ ಸಮಸ್ಯೆ: ಸಿಎಂ
ಏರ್ಪೋರ್ಟ್ ಟ್ಯಾಕ್ಸಿಗೆ ಪಾದಚಾರಿ ಬಲಿ