ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ್ಯಮಂತ್ರಿ ರಾಜೀನಾಮೆಗೆ ಕುಮಾರ್ ಒತ್ತಾಯ  Search similar articles
ರಾಜ್ಯದ ರೈತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಗೋಲಿಬಾರ್ ಹಾಗೂ ರಸಗೊಬ್ಬರ ಸಮಸ್ಯೆ ಕುರಿತು ಸರಕಾರ ನೀಡುವ ಮಾಹಿತಿ ವಾಸ್ತವಾಂಶಕ್ಕಿಂತ ದೂರವಾಗಿದೆ. ಹಾಗಾಗಿ ರಾಜ್ಯ ಸರಕಾರ ಜನತೆಯ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ಸದನದಲ್ಲಿ ವಿರೋಧ ಪಕ್ಷದ ಶಾಸಕರಿಗೆ ಬೆದರಿಕೆ ಹಾಕುವುದು, ಸಂಸತ್ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಬೆದರಿಸುತ್ತಿರುವ ಯಡಿಯೂರಪ್ಪ ತಮ್ಮ ಆಡಳಿತ ವೈಫಲ್ಯತೆಯನ್ನು ಸಾಬೀತು ಪಡಿಸಿದ್ದಾರೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರ ನೀಡಿರುವ ರಸಗೊಬ್ಬರವನ್ನು ರಾಜ್ಯದ ರೈತರಿಗೆ ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ರಸಗೊಬ್ಬರಕ್ಕಾಗಿ ಪ್ರತಿಭಟನೆ ಮಾಡಿದ 88 ಅಮಾಯಕ ರೈತರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಮತ್ತಷ್ಟು
ಪದವೀಧರ ಕ್ಷೇತ್ರ ಚುನಾವಣಾ ಪೈಪೋಟಿ
ರಸಗೊಬ್ಬರ: ದೆಹಲಿಗೆ ನಿಯೋಗ
ಹಳ್ಳಿ ಹಕ್ಕಿಯ ಹಾಡು ಇಂಗ್ಲೀಷ್‌ಗೆ
ರಸಗೊಬ್ಬರ ಧರಣಿಯೊಂದಿಗೆ ಕೊನೆಗೊಂಡ ಅಧಿವೇಶನ
ಎಸ್‌ಐ ಅನಿಲ್ ಕುಮಾರ್ ಬಂಧನ
ಗದಗ: ಪ್ರಶ್ನೆ ಪತ್ರಿಕೆ ಬಯಲು