ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್‌ಪಿಯಲ್ಲಿ ಮೇಜರ್ ಸರ್ಜರಿ  Search similar articles
ಬಹುಜನ ಸಮಾಜವಾದಿ ಪಕ್ಷದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರನ್ನು ಉಚ್ಚಾಟನೆ ಮಾಡಿದ ಬಳಿಕ ರಾಜ್ಯ ಘಟಕದ ಪದಾಧಿಕಾರಿಗಳ ಹುದ್ದೆಗೂ ಭರ್ಜರಿ ಸರ್ಜರಿ ಮಾಡಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ನಿರ್ದೇಶನದ ಮೇರೆಗೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸದಸ್ಯರನ್ನು ಬದಲಾಯಿಸಲಾಗಿದೆ. ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎನ್. ಮಹೇಶ್, ಗೋಪಿನಾಥ್, ಎಂ ಜಯಣ್ಣ ಮೊದಲಾದವನ್ನು ನೇಮಕ ಮಾಡಲಾಗಿದ್ದು, ಕಾರ್ಯದರ್ಶಿಗಳನ್ನಾಗಿ ಚಿಕ್ಕಣ್ಣ, ಲೋಕೇಶ್, ಚಂದ್ರಕಾಂತ್, ವಿ. ನಾರಾಯಣ ಸ್ವಾಮಿ ಸೇರಿದಂತೆ 16 ಮಂದಿಯನ್ನು ನೇಮಕ ಮಾಡಲಾಗಿದೆ.

ಆದರೆ, ಪಕ್ಷದ ಅಧ್ಯಕ್ಷರಾಗಿ ಮಾರಸಂದ್ರ ಮುನಿಯಪ್ಪ ಹಾಗೂ ಖಜಾಂಚಿಯಾಗಿ ಕೋರಮಂಗಲ ಮುನಿಯಪ್ಪ ಅವರನ್ನೇ ಮುಂದುವರೆಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮಧ್ಯೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ತಮ್ಮ ಉಚ್ಚಾಟನೆ ಹಿನ್ನೆಲೆಯಲ್ಲಿ ಮಾಯಾವತಿಯವರನ್ನು ಸಂಪರ್ಕಿಸಲು ಸಿಂಧ್ಯಾ ಪ್ರಯತ್ನ ನಡೆಸುತ್ತಿದ್ದು, ಮುಂದಿನ ರಾಜಕೀಯ ಭವಿಷ್ಯದ ಕುರಿತು ಕೆಲ ದಿನಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತಷ್ಟು
ಮುಖ್ಯಮಂತ್ರಿ ರಾಜೀನಾಮೆಗೆ ಕುಮಾರ್ ಒತ್ತಾಯ
ಪದವೀಧರ ಕ್ಷೇತ್ರ ಚುನಾವಣಾ ಪೈಪೋಟಿ
ರಸಗೊಬ್ಬರ: ದೆಹಲಿಗೆ ನಿಯೋಗ
ಹಳ್ಳಿ ಹಕ್ಕಿಯ ಹಾಡು ಇಂಗ್ಲೀಷ್‌ಗೆ
ರಸಗೊಬ್ಬರ ಧರಣಿಯೊಂದಿಗೆ ಕೊನೆಗೊಂಡ ಅಧಿವೇಶನ
ಎಸ್‌ಐ ಅನಿಲ್ ಕುಮಾರ್ ಬಂಧನ