ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಬಗ್ಗೆ ಅಸಮಾಧಾನವಿಲ್ಲ: ಸಿದ್ದರಾಮಯ್ಯ  Search similar articles
ಕಾಂಗ್ರೆಸ್ ಪಕ್ಷದ ಕುರಿತು ತಮಗೆ ಯಾವುದೇ ರೀತಿಯ ಬೇಸರವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕಳೆದ ಮೂರು ದಿನಗಳ ಕಾಲ ನಡೆದ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳದೆ ವದಂತಿಗೆ ಗ್ರಾಸವಾಗಿದ್ದ ಸಿದ್ದರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಕ್ಷದ ಕುರಿತು ಅತೃಪ್ತಿ ಇಲ್ಲ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಅಧಿವೇಶನಕ್ಕೆ ಹಾಜರಾಗದಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಕಾರ್ಯಕ್ರಮಗಳಿದ್ದುದರಿಂದ ಅಧಿವೇಶನಕ್ಕೆ ಬರಲಾಗಿಲ್ಲ. ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಸಗೊಬ್ಬರ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ರಸಗೊಬ್ಬರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಅನಗತ್ಯ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

500ಕೋಟಿ ರೂ.ಗಳನ್ನು ನೀಡುತ್ತೇನೆ, ಗೊಬ್ಬರ ಕೊಡಿ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಅವರು ಟೀಕಿಸಿದರು.
ಮತ್ತಷ್ಟು
ಶಿಕ್ಷಕರ, ಪದವೀಧರ ಕ್ಷೇತ್ರಕ್ಕೆ ಚುರುಕಿನ ಮತದಾನ
ಬಿಎಸ್‌ಪಿಯಲ್ಲಿ ಮೇಜರ್ ಸರ್ಜರಿ
ಮುಖ್ಯಮಂತ್ರಿ ರಾಜೀನಾಮೆಗೆ ಕುಮಾರ್ ಒತ್ತಾಯ
ಪದವೀಧರ ಕ್ಷೇತ್ರ ಚುನಾವಣಾ ಪೈಪೋಟಿ
ರಸಗೊಬ್ಬರ: ದೆಹಲಿಗೆ ನಿಯೋಗ
ಹಳ್ಳಿ ಹಕ್ಕಿಯ ಹಾಡು ಇಂಗ್ಲೀಷ್‌ಗೆ