ದಕ್ಷಿಣ ಜಿಲ್ಲೆಯಾದ್ಯಂತ ಹರಡಿರುವ ಶಂಕಿತ ಚಿಕನ್‌ಗುನ್ಯಾ ಹಾವಳಿಗೆ 28 ಮಂದಿ ಬಲಿಯಾಗಿದ್ದು, 25ಸಾವಿರಕ್ಕೂ ಹೆಚ್ಚು ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ.
ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಗೊಂಡ ಚಿಕನ್‌ಗುನ್ಯಾ ಕಾಯಿಲೆ ಈಗ ಎಲ್ಲಾ ತಾಲೂಕುಗಳಿಗೂ ಹರಡಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಆರೋಗ್ಯ ಇಲಾಖೆ ಪ್ರಕಾರ ಈ ಕಾಯಿಲೆಗೆ ಸುಮಾರು 25 ಸಾವಿರ ಮಂದಿ ತುತ್ತಾಗಿದ್ದಾರೆ ಎಂದು ತಿಳಿಸಿದೆ. ಆದರೆ ಕೆಲವು ಮೂಲಗಳ ಪ್ರಕಾರ ಇದುವರೆಗೆ ಚಿಕನ್‌ಗುನ್ಯಾ ಕಾಯಿಲೆಗೆ ಸುಮಾರು 3ಲಕ್ಷ ಜನ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದುವರೆಗೆ ಚಿಕನ್‌ಗುನ್ಯಾ ಕಾಯಿಲೆಯಿಂದ ಬಲಿಯಾದವರೆಲ್ಲಾ ಆರೋಗ್ಯ ಇಲಾಖೆ ನೀಡಿರುವ ಔಷಧಿ ಪಡೆದುಕೊಂಡಿದ್ದರು. ಆದರೆ ಈಗ ಚಿಕನ್‌ಗುನ್ಯಾದಿಂದ ಇದುವರೆಗೆ ಯಾರು ಸಾವನ್ನಪ್ಪಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾಜಧಾನಿಯಲ್ಲಿ ಚಿಕನ್‌ಗುನ್ಯಾ ಛಾಯೆ ದಕ್ಷಿಣ ಕನ್ನಡಾದಾದ್ಯಂತ ವ್ಯಾಪಕ ಹರಡಿರುವ ಚಿಕನ್‌ಗುನ್ಯಾ ಈಗ ಬೆಂಗಳೂರಿಗೂ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಶ್ರೀರಾಮಪುರಂನಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ 17ಜನರು ತೀವ್ರ ಜ್ವರ ಮತ್ತು ಗಂಟು ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
|