ಹಳೆ ದ್ವೇಷ ಹಾಗೂ ಮಸೀದಿ ವಿಚಾರದ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಎಂಟು ಜನ ಆರೋಪಿಗಳನ್ನು ಕುಮಾರಸ್ವಾಮಿ ಲೇಓಟ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಲಿಯಾಜ್ ನಗರದ ಇಂತಿಯಾಸ್, ಸಲಾವುದ್ದೀನ್ ಖಾನ್, ಇನಾಯತ್, ಶೀಖ್ ಇಸ್ಮಾಯಿಲ್, ಗೌಸ್ ಖಾನ್, ಮೌಲಾನಾ, ನಿಸಾರ್ ಅಹ್ಮದ್ ಹಾಗೂ ಮನ್ಸೂರ್ ಪಾಷ ಬಂಧಿತ ಆರೋಪಿಗಳಾಗಿದ್ದಾರೆ.
ಸೋಮವಾರದಂದು ರಾತ್ರಿ ವೇಳೆಯಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಜ್ ನಗರದಲ್ಲಿ ರಿಜ್ವಾನ್ ಹಾಗೂ ಮೆಹಬೂಬ್ ಆಲಿಯಾಸ್ ಬಾಬು ಅವರನ್ನು ಕೊಲೆ ಮಾಡಿದ ಈ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಆದರೆ ತನಿಖೆ ಚುರುಕುಗೊಳಿಸಿದ ಪೊಲೀಸರು ಊಟಿಗೆ ಹೊರಡಲು ಸಿದ್ಧವಾಗಿದ್ದ ಈ ಎಂಟು ಮಂದಿಯನ್ನು ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ರಿಜ್ವಾನ್ ಸಹೋದರ ಫೈಸಲ್ ಎಂಬಾತನನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಜ್ವಾನ್ ಸಾಕ್ಷಿ ಹೇಳಿದ್ದ. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಈತನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಸೋಮವಾರದಂದು ರಿಜ್ವಾನ್ ತನ್ನ ಗೆಳೆಯನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಬೆನ್ನಟ್ಟಿದ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿದ್ದಾರೆ. ಇದಕ್ಕೂ ಮೊದಲು ಮಸೀದಿ ವಿಷಯಕ್ಕೆ ಸಂಬಂಧಿಸದಂತೆ ರಿಜ್ವಾನ್ ಮತ್ತು ಕೆಲ ಗುಂಪಿನೊಂದಿಗೆ ದ್ವೇಷ ಬೆಳೆದಿತ್ತು ಎನ್ನಲಾಗಿದೆ.
|