ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಧಾನ ಪರಿಷತ್‌ಗೆ ಶೇ.75.6 ಮತದಾನ  Search similar articles
ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ. 75.6 ಮತದಾನವಾಗಿದೆ. ಈಶಾನ್ಯ, ಆಗ್ನೇಯ, ಪಶ್ಚಿಮ ಪದವೀಧರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆ ನಡೆದ ಚುನಾವಣೆ ಗುರುವಾರ ಸಂಜೆ ನಾಲ್ಕು ಗಂಟೆಗೆ ಮುಕ್ತಾಯಗೊಂಡಿದೆ.

ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಶೇ. 95 ರಷ್ಟು ದಾಖಲಾಗಿದ್ದರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ 76ರಷ್ಟು ಮತದಾನವಾಗಿದೆ. ಅಂತೆಯೇ, ಈಶಾನ್ಯ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇ.73ರಷ್ಟು ಮತದಾನವಾಗಿರುವ ವರದಿ ಬಂದಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದ್ದು, ಶೇ. 61ರಷ್ಟು ಮತದಾನ ದಾಖಲಾಗಿದೆ.

ಈ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ್, ಶಶಿಲ್ ಜಿ. ನಮೋಶಿ, ಪಕ್ಷೇತರರಾಗಿ ಮಾಜಿ ಶಾಸಕ ವಾಟಾಳ್ ನಾಗರಾಜ್, ಎಂ. ನೀಲಯ್ಯ, ಎಚ್.ಎಸ್. ಶಿವಶಂಕರ್ ಸೇರಿದಂತೆ ಹಲವರ ಭವಿಷ್ಯ ಮತಗಟ್ಟೆಯಲ್ಲಿ ದಾಖಲಾಗಿದೆ.

ಧಾರವಾಡದಲ್ಲಿ ನಡೆದ ನಕಲಿ ಮತದಾನ ಯತ್ನ ಪ್ರಕರಣ ಬಿಟ್ಟರೆ ಉಳಿದಂತೆ ಶಾಂತಿಯುತ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.
ಮತ್ತಷ್ಟು
ಜೋಡಿ ಕೊಲೆ: ಎಂಟು ಮಂದಿಯ ಬಂಧನ
ವಿಧಾನ ಪರಿಷತ್: ಶೇ.75.6 ಮತದಾನ
ಚಿಕನ್‌ಗುನ್ಯಾ ಕಾಯಿಲೆಗೆ 28 ಮಂದಿ ಬಲಿ
ಅಣುಒಪ್ಪಂದ-ಬಿಕ್ಕಟ್ಟು ಇಲ್ಲ-ಆಸ್ಕರ್ ಫೆರ್ನಾಂಡೀಸ್
ಕಾಂಗ್ರೆಸ್ ಬಗ್ಗೆ ಅಸಮಾಧಾನವಿಲ್ಲ: ಸಿದ್ದರಾಮಯ್ಯ
ಶಿಕ್ಷಕರ, ಪದವೀಧರ ಕ್ಷೇತ್ರಕ್ಕೆ ಚುರುಕಿನ ಮತದಾನ