ಹೈಕಮಾಂಡ್ ಬಯಸಿದರೆ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಲು ತಾನು ಸಿದ್ಧವಿರುವುದಾಗಿ ಎಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ನಿಯತ್ತಿನಿಂದ ಪಾಲಿಸಿಕೊಂಡು ಬಂದಿದ್ದೇನೆ. ಅವಕಾಶ ಕೊಟ್ಟರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಬಲ್ಲೆ ಎಂದು ತಿಳಿಸಿದರು.
1969ರಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಯೂತ್ ಕಾಂಗ್ರೆಸ್‌ನಲ್ಲಿಯೂ ಕೆಲಸ ಮಾಡಿದ್ದೇನೆ. 2003ರಲ್ಲಿ ಕೃಷ್ಣ ಸರ್ಕಾರವಿದ್ದಾಗಲೇ ಮಂತ್ರಿ ಸ್ಥಾನ ತನಗೆ ಬೇಡ, ಅಧ್ಯಕ್ಷ ಸ್ಥಾನ ನೀಡಿ ಎಂದು ಹೈಕಮಾಂಡನ್ನು ವಿನಂತಿಸಿಕೊಂಡಿದ್ದೆ. ಅಲ್ಲದೆ, ಆ ಸಂದರ್ಭದಲ್ಲಿ ಕೆಪಿಸಿಸಿ ಚುನಾವಣೆಗೆ ನಿಂತಿದ್ದರೂ, ಗೆಲ್ಲಲಾಗಿಲ್ಲ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ನಿಭಾಯಿಸುತ್ತೇನೆ ಎನ್ನುವ ನಾಯಕರು ಕಾಂಗ್ರೆಸ್‌ನಲ್ಲಿ ಹಲವಾರಿದ್ದಾರೆ. ಆದರೆ ತಾನು ಅಂತವನಲ್ಲ. ಸ್ಥಾನ ನೀಡಿದರೆ, ಪ್ರತಿ ಗಳಿಗೆಯನ್ನೂ ನಿಭಾಯಿಸಬಲ್ಲೆ ಎಂದು ಭರವಸೆ ನೀಡಿದ್ದಾರೆ.
|