ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ ಅನಿವಾರ್ಯ:ಕಲಾಂ  Search similar articles
ಭಾರತದಲ್ಲಿರುವ ಅಣುಸ್ಥಾವರಗಳಿಗೆ ನಿರಂತರ ಯುರೇನಿಯಂ ಸರಬರಾಜಿಗಾಗಿ ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ತೀರಾ ಅನಿವಾರ್ಯ ಎಂದು ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ವೈಮಾನಿಕಾಂತರಿಕ್ಷಾ ಪ್ರಯೋಗಾಲಯದ ಸುವರ್ಣ ಮಹೋತ್ಸವ ಆಚರಣೆ ಅಂಗವಾಗಿ ನಗರದಲ್ಲಿ ನಡೆಸಿರುವ ವಿಜ್ಞಾನಿಗಳ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರಿಕ ಪರಮಾಣು ಒಪ್ಪಂದದಿಂದ ದೇಶಕ್ಕಾಗುವ ಲಾಭದ ಬಗ್ಗೆ ಎಡಪಕ್ಷಗಳಿಗೆ ಮನವರಿಕೆ ಮಾಡುವಲ್ಲಿ ಯುಪಿಎ ಸರ್ಕಾರ ವಿಫಲವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಥೋರಿಯಂ ರಿಯಾಕ್ಟರ್ಗಳು ಪೂರ್ಣಗೊಳ್ಳುವ ತನಕ ಯುರೇನಿಯಂನ ನಿರಂತರ ಸರಬರಾಜು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಜೊತೆ ಪರಮಾಣು ಒಪ್ಪಂದಕ್ಕೆ ಕೈಜೋಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಪರ್ಯಾಯ ಇಂಧನ ಮೂಲಗಳನ್ನು ಗುರುತಿಸಲು ಭಾರತದ ಉದ್ದೇಶಿತ ಮಾನವ ರಹಿತ ಚಂದ್ರಯಾನ ಯೋಜನೆ ಬಹಳ ಮಹತ್ವದ್ದಾಗಿದೆ. ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿನ ಹೆಚ್ಚಳ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಇಂಧನ ಮೂಲಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಲು ಸಿದ್ಧ: ವಿಶ್ವನಾಥ್
ನಕಲಿ ಮತದಾನಕ್ಕೆ ಯತ್ನಿಸಿದ ಇಬ್ಬರ ಬಂಧನ
ವಿಧಾನ ಪರಿಷತ್‌ಗೆ ಶೇ.75.6 ಮತದಾನ
ಜೋಡಿ ಕೊಲೆ: ಎಂಟು ಮಂದಿಯ ಬಂಧನ
ವಿಧಾನ ಪರಿಷತ್: ಶೇ.75.6 ಮತದಾನ
ಚಿಕನ್‌ಗುನ್ಯಾ ಕಾಯಿಲೆಗೆ 28 ಮಂದಿ ಬಲಿ