ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
10 ಕಡೆಗಳಲ್ಲಿ ಲೋಕಾಯುಕ್ತರ ದಾಳಿ  Search similar articles
ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರು, ತುಮಕೂರು, ಹಾವೇರಿ, ಮೈಸೂರು ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಡಿ.ಎಸ್.ಪಿ ಪಾಟೀಲ್ ನೇತೃತ್ವದಲ್ಲಿ ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ ಐವರು ಐಎಎಸ್ ಅಧಿಕಾರಿಗಳು ಸೇರಿದ್ದಾರೆ. ಮೆಹಬೂಬ್ ಖಾನ್(ಜಿಲ್ಲಾ ನೋಂದಾಣಿಧಿಕಾರಿ), ಎಂ ರಾಮಕೃಷ್ಣ(ಡಿವೈಎಸ್ಪಿ), ಶಿವಪ್ರಕಾಶ್(ಸಹಾಯಕ ಇಂಜಿನಿಯರ್) ಮೊದಲಾದವರ ಮನೆಗೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರೀಶೀಲನೆ ನಡೆಸಿದ್ದಾರೆ.

ಬೆಳಗಾವಿಯ ಸಿಟಿಓ ಜಂಟಿ ಆಯುಕ್ತ ನರಸೇಗೌಡ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು 50 ಸಾವಿರ ರೂ. ನಗದು ಹಣ ಹಾಗೂ ನಿವೇಶನಗಳ ದಾಖಲಾತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂತೆಯೇ, ದಾವಣಗೆರೆಯಲ್ಲಿ ಉಪ ಆಯುಕ್ತ ಅಮಾನುಷ ಷರೀಫ್, ಮೈಸೂರಿನಲ್ಲಿ ಸಿಟಿಓ ಉಪ ಆಯುಕ್ತ ತಂಗಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾವೇರಿಯಲ್ಲಿ ಬಿಡಬ್ಲ್ಯೂಡಿ ಅಧಿಕಾರಿ ಆರ್.ಸಿ. ಬಳ್ಳಾರಿ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಎರಡು ಲಕ್ಷ ರೂ. ಹಣ, ಒಂದು ಕೆಜಿ ಚಿನ್ನ ಹಾಗೂ ಬ್ಯಾಂಕ್, ನಿವೇಶನಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಲೋಕಾಯುಕ್ತರು ನಡೆಸುತ್ತಿರುವ ದಾಳಿ ಇಂದು ಸಂಜೆಯವರೆಗೆ ಮುಂದುವರೆಯುವ ನಿರೀಕ್ಷೆ ಇದೆ.
ಮತ್ತಷ್ಟು
ಅಣು ಒಪ್ಪಂದ ಅನಿವಾರ್ಯ:ಕಲಾಂ
ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಲು ಸಿದ್ಧ: ವಿಶ್ವನಾಥ್
ನಕಲಿ ಮತದಾನಕ್ಕೆ ಯತ್ನಿಸಿದ ಇಬ್ಬರ ಬಂಧನ
ವಿಧಾನ ಪರಿಷತ್‌ಗೆ ಶೇ.75.6 ಮತದಾನ
ಜೋಡಿ ಕೊಲೆ: ಎಂಟು ಮಂದಿಯ ಬಂಧನ
ವಿಧಾನ ಪರಿಷತ್: ಶೇ.75.6 ಮತದಾನ