ರಾಜ್ಯದ ವಿವಿಧೆಡೆಗಳಲ್ಲಿ ಲೋಕಾಯುಕ್ತರು ನಡೆಸಿದ ದಿಢೀರ್ ದಾಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳು ಪತ್ತೆಯಾಗಿವೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗಡೆ ತಿಳಿಸಿದ್ದಾರೆ.
ವಿವಿಧೆಡೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಲೋಕಾಯುಕ್ತರು ಅಧಿಕಾರಿಗಳ ಅಕ್ರಮ ಆಸ್ತಿಯ ಒಟ್ಟು ಮೌಲ್ಯಗಳನ್ನು ಬಹಿರಂಗಗೊಳಿಸಿದರು. ಸಿಓಡಿ ಡಿವೈಎಸ್ಪಿ ಆಗಿರುವ ರಾಮಕೃಷ್ಣ ಅವರ ನಿವಾಸದಲ್ಲಿ 3ಕೋಟಿ 48 ಲಕ್ಷ ರೂ. ಪತ್ತೆಯಾಗಿದ್ದು, 4 ಕೋಟಿ 55 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಗಣಿ, ಭೂ ವಿಜ್ಞಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಹಬೂಬ್ ಖಾನ್ ನಿವಾಸದಲ್ಲಿ 2ಕೋಟಿ 60ಲಕ್ಷ ರೂಪಾಯಿ ಪತ್ತೆಯಾಗಿದೆ. ಅಲ್ಲದೆ, ಮಹಾಲಿಂಗಯ್ಯ (ಇ.ಓ. ಪಂಚಾಯತ್ ರಾಜ್, ಕುಷ್ಟಗಿ)ರವರ ಮನೆಯಲ್ಲಿ 1ಕೋಟಿ 60ಲಕ್ಷ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಉಳಿದಂತೆ ಪತ್ತೆಯಾಗಿರುವ ಅಧಿಕಾರಿಗಳ ಆಸ್ತಿ ವಿವರ ಇಂತಿದೆ ಕೇಶವಮೂರ್ತಿ(ನೋಂದಾಣಿಧಿಕಾರಿ, ತುಮಕೂರು)-2ಕೋಟಿ 7ಲಕ್ಷ ರೂಪಾಯಿ ಆಸ್ತಿ ಮೆಹಬೂಬ್ ಖಾನ್(ಎಂ.ಡಿ. ಗಣಿ ಭೂ ವಿಜ್ಞಾನ)-2ಕೋಟಿ 60 ಲಕ್ಷ ರೂಪಾಯಿ ಆಸ್ತಿ ಡಾ. ಬಲದೇವಕೃಷ್ಣ(ವ್ಯವಸ್ಥಾಪಕ ನಿರ್ದೇಶಕ, ಅಂಬೇಡ್ಕರ್ ಅಭಿವೃದ್ದಿ ನಿಗಮ)-1ಕೋಟಿ 7ಲಕ್ಷ ರೂಪಾಯಿ ಆಸ್ತಿ ಅಮಾನುಷ್ ಷರೀಫ್(ವಾಣಿಜ್ಯ ತೆರಿಗೆ ಅಧಿಕಾರಿ) 1ಕೋಟಿ ಮೂವತ್ತಾರು ಲಕ್ಷ ರೂಪಾಯಿ ಆಸ್ತಿ ಖಯೂಬ್ ಖಾನ್(ಜಿಲ್ಲಾ ನೋಂದಾಣಿಧಿಕಾರಿ, ಬೆಂಗಳೂರು) 2ಕೋಟಿ 67 ಲಕ್ಷ ರೂಪಾಯಿ ಆಸ್ತಿ
|