ರಾಜ್ಯ ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಮಾಜಿ ಸಚಿವ ಎಚ್.ಕೆ. ಪಾಟೀಲ್ ಸೋಲನುಭವಿಸಿದ್ದಾರೆ.
ಪಾಟೀಲ್ ಅವರು ಬಿಜೆಪಿಯ ಮೋಹನ್ ಲಿಂಬೇಕಾಯಿ ಅವರ ವಿರುದ್ಧ 4410 ಮತಗಳಿಂದ ಸೋಲನ್ನು ಅನುಭವಿಸಿದ್ದಾರೆ. ಸೋಲಿನ ಬಳಿಕ ಮಾತನಾಡಿದ ಅವರು, ಜನರ ತೀರ್ಪಿಗೆ ಬದ್ದವಾಗಿದ್ದೇನೆ. ಬಿಜೆಪಿ ಅಲೆ ಮತ್ತೆ ಮರುಕಳಿಸಿದೆ ಎಂದು ತಿಳಿಸಿದರು. ಮೋಹನ್ ಲಿಂಬೀಕಾಯಿ ಅವರ ಗೆಲುವಿನಿಂದಾಗಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ.
ಬೆಂಗಳೂರು ಪದವೀಧರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಜೆಡಿಎಸ್‌ಗೆ ವಿಧಾನಪರಿಷತ್‌ನಲ್ಲಾದರೂ ಒಂದು ಸ್ಥಾನ ಪಡೆದುಕೊಂಡ ತೃಪ್ತಿ ವ್ಯಕ್ತವಾಗಿದೆ.
ಮಂಗಳೂರು ವರದಿ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಜಯ ಗಳಿಸಿರುವ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಜಯಗಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವಿಕೇಂದ್ರೀಕರಣ ಹಾಗೂ ಸ್ಥಳಿಯಾಡಳಿತಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ತಿಳಿಸಿದರು.
|