ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಲಿಲ್ಲದ ಸರದಾರಗೆ ಸೋಲುಣಿಸಿದ ಲಿಂಬೀಕಾಯಿ  Search similar articles
PTI
ಎಚ್.ಕೆ. ಪಾಟೀಲ್ ಮತ್ತೆ ಸೋಲು ಅನುಭವಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೋಹನ್ ಲಿಂಬೀಕಾಯಿ ವಿರುದ್ಧ 4ಸಾವಿರಕ್ಕಿಂತಲೂ ಹೆಚ್ಚಿನ ಮತಗಳಿಂದ ಸೋತು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಕಳೆದ 24 ವರ್ಷಗಳಿಂದ ವಿಧಾನಪರಿಷತ್ನಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿರುವ ಎಚ್.ಕೆ. ಪಾಟೀಲ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಎದುರು ಸೋಲು ಅನುಭವಿಸಿದ ಪಾಟೀಲ್, ಮತ್ತೆ ವಿಧಾನಪರಿಷತ್‌ಗೆ ಆಯ್ಕೆ ಬಯಸಿದ್ದರು. ಆದರೆ ಅಲ್ಲಿ ಸಲ್ಲದವರೂ ಇಲ್ಲಿಯೂ ಸಲ್ಲರಯ್ಯಾ ಎಂಬಂತೆ ವಿಧಾನಪರಿಷತ್‌ನಿಂದಲೂ ಹೊರ ನಡೆದಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಸಚಿವರಾಗಿ ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಪಾಟೀಲ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಬೇಸತ್ತ ಮತದಾರರ ಇವರನ್ನು ತಿರಸ್ಕರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಕ್ಷೇತ್ರದಲ್ಲಿ ಸುಮಾರು ಎರಡು ಸಾವಿರದಷ್ಟು ಅಸಿಂಧು ಮತಗಳು ಕಾಣಿಸಿಕೊಂಡಿವೆ. ಇದರಲ್ಲಿ ಕೆಲವರು ಪಾಟೀಲ್ ವಿರುದ್ಧ ಅಕ್ರೋಶದ ಬರಹಗಳನ್ನು ಬರೆದಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಎಚ್.ಕೆ. ಪಾಟೀಲ್ ಸೋಲು ಹಾಗೂ ಈ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗಳಿಸದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಕಳೆದ ವಿಧಾನಸಭೆಯಲ್ಲಿಯೇ ಅನೇಕ ಹಿರಿಯ ನಾಯಕರು ಸೋತು ಮೂಲೆಗುಂಪಾಗಿದ್ದರು. ಈ ಶಾಕ್‌ನಿಂದ ಚೇತರಿಸಿಕೊಳ್ಳಲು ಬಯಸಿದ್ದ ಕಾಂಗ್ರೆಸ್‌ಗೆ ಮತ್ತೆ ಆಘಾತ ಉಂಟಾಗಿದೆ.
ಮತ್ತಷ್ಟು
ಇಲ್ಲೂ ಸಲ್ಲದ ಎಚ್.ಕೆ.ಪಾಟೀಲ್‌ಗೆ ಸೋಲು
'ಪ್ರಜ್ಞೆ' ತಪ್ಪಿದ ಪ್ರಜ್ಞಾವಂತರು- 2 ಸಾವಿರ ಅಸಿಂಧು ಮತಗಳು
ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ
ಭಯೋತ್ಪಾದಕ ಚಟುವಟಿಕೆ ನಡೆಯುತ್ತಿಲ್ಲ: ಅಲಿಖಾನ್
ಸು.ಕೋರ್ಟ್ ನ್ಯಾ.ಮೂ.ಯಾಗಿ ಜೋಸೆಫ್ ನೇಮಕ
ಸರ್ಕಾರ ಬಹುದಿನ ಉಳಿಯುವುದಿಲ್ಲ: ಖರ್ಗೆ