ವೇಗ ನಿಯಂತ್ರಕವನ್ನು ಅಳವಡಿಕೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿರುವ ಹೈಕೊರ್ಟ್, ಸರಕು ಸಾಗಾಣಿ ಹಳೆ ವಾಹನಗಳಿಗೆ ಮೂರು ತಿಂಗಳು ಗಡುವು ನೀಡಿದ್ದು, ಹೊಸ ವಾಹನಗಳು ವೇಗನಿಯಂತ್ರಕ ಅಳವಡಿಕೆ ನಂತರ ನೋಂದಣಿ ಮಾಡಿಸಬೇಕೆಂದು ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ವೇಣುಗೋಪಾಲ್ ಅವರನ್ನೊಳಗೊಂಡ ಹೈಕೋಟ್ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಅಸಮಾಧಾನಗೊಂಡಿದ್ದು, ಮತ್ತೆ ಮುಷ್ಕರ ನಡೆಸುವ ಕುರಿತು ಚಿಂತನೆ ನಡೆಸಿದೆ.
ಈ ಮಧ್ಯೆ ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ದೇಶಾದ್ಯಂತ ಅಖಿಲ ಭಾರತ ಲಾರಿ ಮಾಲೀಕರು ಮತ್ತು ಚಾಲಕರ ಸಂಘ ಮುಷ್ಕರ ನಡೆಸಲು ತೀರ್ಮಾನಿಸಿದೆ. ಆದರೆ ಈ ಮುಷ್ಕರದಿಂದ ರಾಜ್ಯ ಲಾರಿ ಮಾಲೀಕರ ಸಂಘ ಹಿಂದೆ ಸರಿಯಲು ನಿರ್ಧರಿಸಿತ್ತು.
|