ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಉತ್ತರದಿಂದ ಅಕ್ರೋಶಗೊಂಡ ವ್ಯಕ್ತಿಯೊಬ್ಬ ಅವರಿಗೆ ಕಪಾಳ ಮೋಕ್ಷ ನಡೆಸಿದ ಘಟನೆ ಸೋಮವಾರ ಮಧುಗಿರಿ ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದೆ.
ಎಸೈ ಸೈಯದ್ ಮೊಯಿದ್ದೀನ್ ಪಾಷ್ ಎಂಬವರು ಹಲ್ಲೆಗೀಡಾಗಿದ್ದಾರೆ. ಸೋಮವಾರ ನಡೆದ ಲಕ್ಷ್ಮೀಪುರದಲ್ಲಿ ಜೆಡಿಎಸ್ ಶಾಸಕ ಗೌರಿಶಂಕರ್ ಜನಸಂಪರ್ಕ ಸಭೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಸೈ ಉತ್ತರದಿಂದ ಅಸಮಾಧಾನಗೊಂಡ ಶಾಸಕರ ಬೆಂಬಲಿಗ ಹನುಮಂತರಾಯಪ್ಪ ಎಂಬಾತ ಎದ್ದು ಕಪಾಳ ಮೋಕ್ಷ ನಡೆಸಿರುವುದಾಗಿ ವರದಿ ತಿಳಿಸಿದೆ.
ಗೌರಿಶಂಕರ್ ಅವರು ಈ ಕ್ಷೇತ್ರದಲ್ಲಿ ಆರಿಸಿ ಬಂದ ಬಳಿಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಎಸ್ಪಿ ಚನ್ನಬಸಪ್ಪ ಅವರು, ಕಾಯ್ದೆ 353 ಹಾಗೂ 337ರನ್ವಯ ಹನುಮಂತರಾಯಪ್ಪ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
|