ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಸ್ತಿ ವಿವರ : ಹಾಲಿ ಮಾಜಿ ಶಾಸಕರಿಗೆ ನೋಟಿಸ್  Search similar articles
ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಸಚಿವ ಡಿ.ಸುಧಾಕರ್ , ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸೇರಿದಂತೆ 161 ಹಾಲಿ ಹಾಗೂ ಮಾಜಿ ಸಚಿವರಿಗೆ ಲೋಕಾಯುಕ್ತ ಇಲಾಖೆಯು ಬುಧವಾರ ನೋಟಿಸ್ ಜಾರಿ ಮಾಡಲಿದೆ.

ಲೋಕಾಯುಕ್ತ ಕಾನೂನು ಪ್ರಕಾರ 2007ರ ಜನವರಿ ಒಂದರಿಂದ ಡಿಸೆಂಬರ್ 31 ರ ಅವಧಿಯಲ್ಲಿ ಆಸ್ತಿ ವಿವರಗಳನ್ನು ಆ ಅವಧಿಯಲ್ಲಿ ಶಾಸಕರಾಗಿದ್ದವರು ಹಾಗೂ ಹಾಲಿ ಶಾಸಕರಾಗಿರುವವರು ಸಲ್ಲಿಸಬೇಕಾಗಿದೆ. ಆಸ್ತಿ ವಿವರ ಸಲ್ಲಿಸದ ಶಾಸಕ ಹಾಗೂ ಸಚಿವರಿಗೆ ಲೋಕಾಯುಕ್ತ ನಾಳೆ ನೋಟಿಸ್ ಜಾರಿ ಮಾಡಿ ಅದರ ವಿವರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ 113 ಜನ ಆಸ್ತಿ ವಿವರವನ್ನು ಸೋಮವಾರದೊಳಗಡೆ ಸಲ್ಲಿಸಬೇಕಿತ್ತು. ಆದರೆ ಅವರು ಸಲ್ಲಿಸಲಿಲ್ಲ. ಇದದರಿಂದಾಗಿ ಲೋಕಾಯುಕ್ತ ನೋಟಿಸ್ ಜಾರಿ ಮಾಡಲು ಮುಂದಾಗಿದೆ.

ಆಸ್ತಿ ವಿವರ ಸಲ್ಲಿಸದ ಪ್ರಮುಖರೆಂದರೆ, ಧರ್ಮಸಿಂಗ್, ಸಿ.ಚನ್ನಿಗಪ್ಪ, ಚೆಲುವರಾಯಸ್ವಾಮಿ, ಆರ್.ವಿ.ದೇಶಪಾಂಡೆ, ಹಾಗೂ ಇತರರು. ವಿಧಾನಸಭಾ ಸದಸ್ಯರಾಗಿರುವ ಸಚಿವ ಡಿ.ಸುಧಾಕರ್, ಶಾಸಕ ದಿನೇಶ್ ಗುಂಡೂರಾವ್ ಕೂಡಾ ಸೇರಿದ್ದಾರೆ.
ಮತ್ತಷ್ಟು
ಜನಸಂಪರ್ಕ ಸಭೆಯಲ್ಲಿ ಎಸೈಗೆ ಕಪಾಳ ಮೋಕ್ಷ!
ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ರೆಡ್ಡಿ
ವೇಗ ನಿಯಂತ್ರಕ ಕಡ್ಡಾಯಕ್ಕೆ ಹೈ.ಕೋ. ಆದೇಶ
ಮತ್ತೊಮ್ಮೆ ಪಕ್ಷ ಒಡೆಯುವ ಮಾತನ್ನಾಡಿದ ಈಶ್ವರಪ್ಪ
ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ತಿಪ್ಪಣ್ಣ
ರೈತರಿಗೆ ಉಚಿತ ವಿದ್ಯುತ್ ಅಸಾಧ್ಯ: ಸಿಎಂ