ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳಾ ಆಯೋಗಕ್ಕೆ ಮತ್ತೆ ನೇಸರ್ಗಿ  Search similar articles
ಕೃಷ್ಣರಾಜ ಶಾಸಕ ಎ.ರಾಮದಾಸ್ ಹಾಗೂ ನರಗುಂದ ಶಾಸಕ ಸಿ.ಸಿ. ಪಾಟೀಲ್ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಸರ್ಕಾರ ನೇಮಿಸಿದೆ. ಇದರ ಜೊತೆಗೆ ನಿಗಮ ಮಂಡಳಿಗೂ ಸರ್ಕಾರ ಕೈ ಹಾಕಿದ್ದು, ಸೋತ ಹಾಗೂ ಸಚಿವ ಸ್ಥಾನದಿಂದ ವಂಚಿತರಾದ ಹಿರಿಯ ನಾಯಕರಿಗೆ ಇಲ್ಲಿ ಅವಕಾಶ ನೀಡಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಪ್ರಮೀಳಾ ನೇಸರ್ಗಿ ಅವರನ್ನು ಎರಡನೇ ಬಾರಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಕೆಲ ಸಮಯ ಆಯೋಗದಲ್ಲಿ ಯಾವುದೇ ಅಧ್ಯಕ್ಷರಿಲ್ಲದೇ ಬಂದ ದೂರುಗಳು ಕಡತದಲ್ಲಿಯೇ ಕೊಳೆಯುತ್ತಿದ್ದವು. ಈ ಬಗ್ಗೆ ಅನೇಕ ಮಾಧ್ಯಮಗಳು ವರದಿ ಮಾಡಿದ್ದವು.

ದೆಹಲಿ ಪ್ರತಿನಿಧಿಯಾಗಿ ನಿವೃತ್ತ ಪೊಲೀಸ್ ಅಧಿಕಾರಿ ಡಾ. ಸುಭಾಷ್ ಭರಣಿ ಅವರನ್ನು ಹಾಗೂ ಹೊಸದಾಗಿ ರೂಪುಗೊಂಡಿರುವ ಅನಿವಾಸಿ ಭಾರತೀಯರ ಘಟಕದ ಸಂಯೋಜಕರನ್ನಾಗಿ ವಿಧಾನಪರಿಷತ್ ಸದಸ್ಯ ಡಾ. ಗಣೇಶ್ ಕಾರ್ಣಿಕ್ ಅವರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸ್ಥಾನದಿಂದ ವಂಚಿತರಾಗಿರುವ ಆನೇಕಲ್ ಶಾಸಕ.ಎ. ನಾರಾಯಣ ಸ್ವಾಮಿ ಅವರನ್ನು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರನ್ನಾಗಿ ಹಾಗೂ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಜಿ.ಟಿ. ದೇವೇಗೌಡರನ್ನು ನೇಮಿಸಲಾಗಿದೆ.
ಮತ್ತಷ್ಟು
ಆಸ್ತಿ ವಿವರ : ಹಾಲಿ ಮಾಜಿ ಶಾಸಕರಿಗೆ ನೋಟಿಸ್
ಜನಸಂಪರ್ಕ ಸಭೆಯಲ್ಲಿ ಎಸೈಗೆ ಕಪಾಳ ಮೋಕ್ಷ!
ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ರೆಡ್ಡಿ
ವೇಗ ನಿಯಂತ್ರಕ ಕಡ್ಡಾಯಕ್ಕೆ ಹೈ.ಕೋ. ಆದೇಶ
ಮತ್ತೊಮ್ಮೆ ಪಕ್ಷ ಒಡೆಯುವ ಮಾತನ್ನಾಡಿದ ಈಶ್ವರಪ್ಪ
ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ತಿಪ್ಪಣ್ಣ