ಕೇಂದ್ರ ಸರಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ ಮುಷ್ಕರದ ಕರೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುಷ್ಕರ ನಡೆಯಲಿದೆ.
ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಈ ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ಸಮಿತಿಯ ಕರೆಗೆ ಬೆಂಬಲ ನೀಡಲು ಮತ್ತು ರಾಜ್ಯ ಸರಕಾರದ ನೀತಿಗಳನ್ನು ವಿರೋಧಿಸಲು ರಾಜ್ಯದಲ್ಲೂ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟ್ಸ್ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ಹಳೆಯ ಹಾಗೂ ಹೊಸ ಲಾರಿಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಬೇಕೆಂಬುದನ್ನು ಲಾರಿ ಮಾಲೀಕರು ಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ 2 ಲಕ್ಷ 75 ಸಾವಿರ ಲಾರಿಗಳಿದ್ದು, ಮುಷ್ಕರದಿಂದ ದಿನಕ್ಕೆ 500 ಕೋಟಿ ರೂ ನಷ್ಟವಾಗುತ್ತದೆ ಎಂದು ಕಾರ್ಯದರ್ಶಿ ಬಿ.ವಿ. ನಾರಾಯಣಪ್ಪ ತಿಳಿಸಿದ್ದಾರೆ.
ಬೆಂಬಲ ಇಲ್ಲ ಈ ನಡುವೆ ಮುಷ್ಕರಕ್ಕೆ ರಾಜ್ಯ ಸಂಘಗಳ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಚನ್ನಾರೆಡ್ಡಿ ಹೇಳಿದ್ದಾರೆ.
|