ನಗರದಲ್ಲಿ ದಿನದಿಂದ ದಿನಕ್ಕೆ ಚಿಕೂನ್ ಗುನ್ಯಾ ಹಾವಳಿ ಹೆಚ್ಚುತ್ತಿದೆ. ಸೋಮವಾರ 29 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀರಾಂಪುರ ಮತ್ತು ಭಾಷ್ಯಂನಗರದಲ್ಲಿ ಕೈಕಾಲು ನೋವು, ಜ್ವರ ಹಾಗೂ ಇತರ ತೊಂದರೆಗಳಿಂದ ಕಳೆದ ಮೂರು ದಿನಗಳಿಂದ 100 ಕ್ಕೂ ಹೆಚ್ಚು ಮಂದಿ ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ 15 ದಿನಗಳಲ್ಲಿ ನಗರದಲ್ಲಿ 500 ಕ್ಕೂ ಹೆಚ್ಚು ಮಂದಿ ಶಂಕಿತ ಚಿಕೂನ್ ಗುನ್ಯಾ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ, ಆ ಪೈಕಿ 25 ಮಂದಿಗೆ ರೋಗದ ಲಕ್ಷಣಗಳು ಪತ್ತೆಯಾಗಿವೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸೊಳ್ಳೆ ನಿಯಂತ್ರಣಕ್ಕಾಗಿ ನಿರಂತರ ಫಾಗಿಂಗ್ ಆರಂಭಿಸಿದ್ದಾರೆ. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವೈದ್ಯರ ತಂಡ ನಗರಕ್ಕೆ ಆಗಮಿಸಿದೆ.
ಶಂಕಿತ ಚಿಕೂನ್ ಗುನ್ಯಾ ಪ್ರಕರಣಗಳು ಕಂಡುಬಂದಿರುವ ಪ್ರದೇಶಗಳಲ್ಲಿ ಪಾಲಿಕೆ ಅಧಿಕಾರಿಗಳು ವೈದ್ಯರ ಜೊತೆ ಶಿಬಿರಗಳ್ನು ನಡೆಸುತ್ತಿದ್ದಾರೆ.
|