ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರುಣಾಕರ ರೆಡ್ಡಿಗೆ ಅಂಟಿದ ವಾಸ್ತು ರೋಗ  Search similar articles
NRB
ಸಚಿವರೆಲ್ಲರೂ ಈಗ ತಮಗೆ ಸಿಕ್ಕಿರುವ ಬಂಗಲೆಯ ವಾಸ್ತುವಿನ ಮೇಲೆ ಗಮನವಹಿಸುತ್ತಿದ್ದಾರೆ. ವಾಸ್ತು ತಜ್ಞರನ್ನು ಕರೆಸಿ ಅದನ್ನು ತಮಗೆ ಬೇಕಂತೆ ಬದಲಾಯಿಸುತ್ತಿದ್ದಾರೆ. ಕಂದಾಯ ಸಚಿವ ಕರುಣಾಕರ ರೆಡ್ಡಿ ಈ ಕೆಲಸದಲ್ಲಿ ಇತರರಿಗಿಂತ ಒಂದು ಕೈ ಮುಂದಿದ್ದಾರೆ.

ರೇಸ್ಕೋರ್ಸ್ ರಸ್ತೆಯ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಪಕ್ಕದ ಮನೆಯನ್ನು ಇವರಿಗೆ ನೀಡಲಾಗಿತ್ತು. ಆದರೆ ಇದರ ವಾಸ್ತು ಇವರಿಗೆ ಇಷ್ಟವಾಗಲಿಲ್ಲ.ಅದಕ್ಕಾಗಿ ತಾವು ನೋಡಿದ ತೆಲುಗು ಖಳನಾಯಕನ ಮನೆಯ ಶೈಲಿಯಲ್ಲೇ ನಿರ್ಮಿಸಲು ಮುಂದಾಗಿದ್ದಾರೆ.

ತೆಲುಗು ಚಿತ್ರವೊಂದರ ಖಳನಾಯಕನ ಮನೆಯ ವಾಸ್ತುಶಿಲ್ಪದ ನಕ್ಷೆ ಹಾಗೂ ತಾವು ಸಿಂಗಾಪುರಕ್ಕೆ ಭೇಟಿ ನೀಡಿದಾಗ ನೋಡಿರುವ ಮನೆಯ ವಾಸ್ತುಶಿಲ್ಪದ ನಕ್ಷೆಯಲ್ಲಿ ಒಂದನ್ನು ಆಯ್ಕೆ ಮಾಡಿ ಮರು ನಿರ್ಮಾಣ ಮಾಡುವಂತೆ ಸೂಚಿಸಿದ್ದಾರೆ. ಸುಮಾರು ಒಂದೂವರೆ ಎಕರೆಯಷ್ಟು ಪ್ರದೇಶದಲ್ಲಿ ಐದು ಕೋಣೆಗಳಿರುವ ಈ ಬಂಗಲೆಯ ವಾಸ್ತು ಕಾಮಗಾರಿ ಈಗಾಗಲೇ ಆರಂಭವಾಗಿದೆ. ಸುಮಾರು 25 ಕ್ಕೂ ಹೆಚ್ಚು ಕಾರ್ಮಿಕರು ರಾತ್ರಿ ಹಗಲು ದುಡಿಯುತ್ತಿದ್ದಾರೆ. ನಾಲ್ಕು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ 'ರಾಜ್ಯದ ಒಳಿತಿಗಾಗಿ' ತಮ್ಮ ಅಧಿಕೃತ ನಿವಾಸದ ವಾಸ್ತುವನ್ನು ಬದಲಿಸಿದ್ದರು. ಆದರೆ ಅವರ ಆಡಳಿತವೇನೂ ಸಲೀಸಾಗಿರಲಿಲ್ಲ ಮತ್ತು ರಾಜ್ಯ ಹೇಳಿಕೊಳ್ಳುವಂತ ಬರ್ಕತ್ ಆಗಿರಲೂ ಇಲ್ಲ.

ಒಂದು ಮೂಲಕ ಪ್ರಕಾರ ಈ ನವೀಕರಣಕ್ಕೆ ಸುಮಾರು 70 ಲಕ್ಷ ರೂ. ಖರ್ಚಾಗಲಿದೆ. ಇದು ಸರಕಾರದ ಹಣ. ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ!
ಮತ್ತಷ್ಟು
ನಗರದಲ್ಲಿ ಹೆಚ್ಚುತ್ತಿರುವ ಚಿಕೂನ್ ಗುನ್ಯಾ
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಅತಿಕ್ರಮಣಕಾರ ವಿರುದ್ಧ ಶಿಸ್ತುಕ್ರಮ
ಮಹಿಳಾ ಆಯೋಗಕ್ಕೆ ಮತ್ತೆ ನೇಸರ್ಗಿ
ಆಸ್ತಿ ವಿವರ : ಹಾಲಿ ಮಾಜಿ ಶಾಸಕರಿಗೆ ನೋಟಿಸ್
ಜನಸಂಪರ್ಕ ಸಭೆಯಲ್ಲಿ ಎಸೈಗೆ ಕಪಾಳ ಮೋಕ್ಷ!