ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೇಗ ನಿಯಂತ್ರಕ: ನಿರ್ಧಾರ ಮರುಪರಿಶೀಲನೆಗೆ ರಾಜ್ಯ ಸಿದ್ಧ  Search similar articles
ಭಾರಿ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವುದನ್ನು ಕಡ್ಡಾಯ ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಸ್ಪಷ್ಟಪಡಿಸಿದ್ದಾರೆ.

ಮೋಟಾರ್ ಕಾಯ್ದೆ ನಿಯಮ 118ರ ಪ್ರಕಾರ ವೇಗ ನಿಯಂತ್ರಕ ಅಳವಡಿಸಲಾಗುತ್ತಿದೆ. ಆದರೆ ಕಲಂ 118ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಲಾರಿ ಮಾಲೀಕರು ಮುಷ್ಕರವನ್ನು ಹಿಂದಕ್ಕೆ ಪಡೆಯಬೇಕೆಂದು ಮನವಿ ಮಾಡಿದ ಅವರು, ಮುಷ್ಕರದಿಂದ ಅಗತ್ಯವಸ್ತುಗಳ ಸರಬರಾಜಿಗೆ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಉಳಿದ ರಾಜ್ಯಕ್ಕಿಂತ ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ನೀಡುವ ದರದಲ್ಲಿಯೇ ನಮ್ಮ ರಾಜ್ಯಕ್ಕೂ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಅವರು, ಈ ಬಗ್ಗೆ ಕೇಂದ್ರ ಸರ್ಕಾರದ ಜತೆಗೂ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಮಧ್ಯೆ, ನಿನ್ನೆ ಮಧ್ಯರಾತ್ರಿಯಿಂದ ಲಾರಿ ಮುಷ್ಕರದ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಆಚಾರ್ಯ ಚರ್ಚೆ ನಡೆಸಿದ್ದಾರೆ.
ಮತ್ತಷ್ಟು
ಕೃಷಿ ಪೂರಕ ಬಜೆಟ್: ಯಡಿಯೂರಪ್ಪ ಭರವಸೆ
ನಿಮ್ಮ ನಿಯೋಗಕ್ಕೆ ನಾವಿಲ್ಲ: ವಿಪಕ್ಷಗಳು
ಆಸ್ತಿ ವಿವರ ಸಲ್ಲಿಸದ ಲೋಕಾಯುಕ್ತ ನೋಟಿಸ್
ನ್ಯಾಯಧೀಶ ಸಿರಿಯಾಕ್‌ರಿಗೆ ವಿದಾಯ
ಡಿಜಿಪಿಯಾಗಿ ಶ್ರೀಕುಮಾರ್ ಅಧಿಕಾರ ಸ್ವೀಕಾರ
ಕರುಣಾಕರ ರೆಡ್ಡಿಗೆ ಅಂಟಿದ ವಾಸ್ತು ರೋಗ