ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾತ್ಯತೀತ ಶಕ್ತಿಗಳ ಮೈತ್ರಿಗೆ ಬಂಗಾರಪ್ಪ ಸಲಹೆ  Search similar articles
NRB
ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಬಿಜೆಪಿ ಸೇರ್ಪಡೆಗೊಳ್ಳಲಿದ್ದು, ಈ ಮೂಲಕ ಪಕ್ಷೇತರರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಿಳಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಂಗಾರಪ್ಪ ಬಾಂಬ್ ಸಿಡಿಸಿದ್ದಾರೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಪಕ್ಷೇತರ ಸಚಿವರಿಗೆ ಹಾಗೂ ಶಾಸಕರಿಗೆ ಆಪತ್ತು ಎದುರಾಗಲಿದ್ದು, ಬಿಜೆಪಿ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಲಿದೆ ಎಂದು ತಿಳಿಸಿದ್ದಾರೆ.

ಆರು ಜನ ಶಾಸಕರ ಜೊತೆ ನಿರಂತರ ಸಂಪರ್ಕ ಹೊಂದಿರುವುದಾಗಿ ತಿಳಿಸಿದ ಅವರು, ಬಿಜೆಪಿಯಲ್ಲಿ ಪಕ್ಷೇತರರನ್ನು ಬದಿಗೊತ್ತುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪಕ್ಷೇತರರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಪಕ್ಷೇತರರ ಶಾಸಕರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಗಣಿ ಬಲದ ಮೇಲೆ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ತಲೆದೋರಿರುವ ರಸಗೊಬ್ಬರ ವಿವಾದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಕೋಮು ಶಕ್ತಿಗಳನ್ನು ಬಗ್ಗುಬಡಿಸಲು ಜಾತ್ಯಾತೀತ ಪಕ್ಷಗಳು ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಮತ್ತಷ್ಟು
3 ಲಕ್ಷ ಮಂದಿಗೆ ಚಿಕೂನ್‌ಗುನ್ಯಾ: ಕರಂದ್ಲಾಜೆ
ವೇಗ ನಿಯಂತ್ರಕ: ನಿರ್ಧಾರ ಮರುಪರಿಶೀಲನೆಗೆ ರಾಜ್ಯ ಸಿದ್ಧ
ಕೃಷಿ ಪೂರಕ ಬಜೆಟ್: ಯಡಿಯೂರಪ್ಪ ಭರವಸೆ
ನಿಮ್ಮ ನಿಯೋಗಕ್ಕೆ ನಾವಿಲ್ಲ: ವಿಪಕ್ಷಗಳು
ಆಸ್ತಿ ವಿವರ ಸಲ್ಲಿಸದ ಲೋಕಾಯುಕ್ತ ನೋಟಿಸ್
ನ್ಯಾಯಧೀಶ ಸಿರಿಯಾಕ್‌ರಿಗೆ ವಿದಾಯ