ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಂಕಿತ ಉಗ್ರರ ವಿಚಾರಣೆ ಜಿಲ್ಲಾ ನ್ಯಾಯಾಲಯಕ್ಕೆ  Search similar articles
ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಿದ ಹಿನ್ನೆಲೆಯಲ್ಲಿ ನ್ಯಾಯಂಗ ಬಂಧನದಲ್ಲಿರುವ 11 ಮಂದಿ ಶಂಕಿತ ಉಗ್ರರ ವಿಚಾರಣೆಯನ್ನು ಧಾರವಾಡ ಜಿಲ್ಲಾ ಕೋರ್ಟ್‌ಗೆ ಹಸ್ತಾಂತರಿಸುವಂತೆ ಸೆಷನ್ಸ್ ನ್ಯಾಯಾಲಯ ಆದೇಶಸಿದೆ.

ಬುಧವಾರ ನಗರದ ಒಂದನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.

ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಗಿದಿದ್ದರಿಂದ ಬಂಧಿತ ಉಗ್ರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಬಂಧಿತ ಶಂಕಿತ ಉಗ್ರರ ಹೆಚ್ಚಿನ ವಿಚಾರಣೆಯ ಹಿನ್ನೆಲೆಯಲ್ಲಿ ಧಾರವಾಡ ಕೋರ್ಟ್‌ಗೆ ವರ್ಗಾಯಿಸಲಾಗಿದೆ.

ಚಪ್ಪಲಿ ಎಸೆತ
ಶಂಕಿತ ಉಗ್ರರನ್ನು ಕೋರ್ಟ್‌ಗೆ ಹಾಜರು ಪಡಿಸಿದ ಸಂದರ್ಭದಲ್ಲಿ ಪಾಲಿಕೆ ಸದಸ್ಯನೊಬ್ಬ ಉಗ್ರರ ವಾಹನದತ್ತ ಚಪ್ಪಲಿ ಎಸೆದ ಘಟನೆ ಕೋರ್ಟ್ ಆವರಣದಲ್ಲಿ ನಡೆಯಿತು.

ಉಗ್ರನೊರ್ವ ನಗರ ಪಾಲಿಕೆ ಸದಸ್ಯರಿಗೆ ಚಪ್ಪಲಿ ತೋರಿಸಿದ್ದರಿಂದ ಕುಪಿತಗೊಂಡ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ್, ಉಗ್ರರ ವಾಹನದತ್ತ ಚಪ್ಪಲಿ ಎಸೆದರು. ಅಲ್ಲದೆ, ಶಂಕಿತ ಉಗ್ರರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಅಲ್ಲಿದ್ದ ಕೆಲವರು ಕೂಗಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿದ್ದು ಪರಿಸ್ಥಿತಿ ತಿಳಿಗೊಂಡಿತು.
ಮತ್ತಷ್ಟು
ಜಾತ್ಯತೀತ ಶಕ್ತಿಗಳ ಮೈತ್ರಿಗೆ ಬಂಗಾರಪ್ಪ ಸಲಹೆ
3 ಲಕ್ಷ ಮಂದಿಗೆ ಚಿಕೂನ್‌ಗುನ್ಯಾ: ಕರಂದ್ಲಾಜೆ
ವೇಗ ನಿಯಂತ್ರಕ: ನಿರ್ಧಾರ ಮರುಪರಿಶೀಲನೆಗೆ ರಾಜ್ಯ ಸಿದ್ಧ
ಕೃಷಿ ಪೂರಕ ಬಜೆಟ್: ಯಡಿಯೂರಪ್ಪ ಭರವಸೆ
ನಿಮ್ಮ ನಿಯೋಗಕ್ಕೆ ನಾವಿಲ್ಲ: ವಿಪಕ್ಷಗಳು
ಆಸ್ತಿ ವಿವರ ಸಲ್ಲಿಸದ ಲೋಕಾಯುಕ್ತ ನೋಟಿಸ್