ಅನುದಾನರಹಿತ ಶಾಲೆಗಳಲ್ಲೂ ಕನ್ನಡ ಕಡ್ಡಾಯಗೊಳಿಸುವುದು ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ರಾಜ್ಯಸರ್ಕಾರಕ್ಕೆ ತೀವ್ರ ಮುಖಭಂಗವಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಶಾಲೆಗಳೂ ಕನ್ನಡದಲ್ಲೇ ಬೋಧಿಸಬೇಕೆಂಬ ರಾಜ್ಯಸರ್ಕಾರದ ಆದೇಶಕ್ಕೆ ಹಿನ್ನಡೆಯಾದಂತಾಗಿದೆ.
ಭಾರತ ಬಹುಭಾಷೆ-ಸಂಸ್ಕೃತಿಗಳನ್ನು ಹೊಂದಿದ ದೇಶ, ತನ್ನ ಶಿಕ್ಷಣದ ಭಾಷಾ ಮಾಧ್ಯಮ ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಭಾರತೀಯ ಸಂವಿಧಾನ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ನೀಡಿದೆ. ಕರ್ನಾಟಕ ರಾಜ್ಯ ಕನ್ನಡ ಕಡ್ಡಾಯ ಮಾಡಿ ಹೊರಡಿಸಿರುವ ಆದೇಶವು ಇದಕ್ಕೆ ವಿರುದ್ಧವಾಗಿದ್ದು, ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಉಪದೇಶ ಮಾಡಿದೆ.
ನ್ಯಾ. ಸಿರಿಯಾಕ್ ಜೋಸೆಫ್, ನ್ಯಾ. ಮಂಜುಳಾ ಚೆಲ್ಲೂರ್ ಹಾಗೂ ಎನ್.ಕುಮಾರ್ ಅವರನ್ನೊಳಗೊಂಡ ತ್ರಿಸದಸ್ಯಪೀಠವು ತೀರ್ಪು ನೀಡಿದ್ದು, ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ಕನ್ನಡವನ್ನು ಒಂದು ವಿಷಯವನ್ನಾಗಿ ಬೋಧಿಸಬಹುದೆಂದು ಸಲಹೆ ನೀಡಿದೆ.
ಈ ತೀರ್ಪಿನ ಬಗ್ಗೆ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ತೀವ್ರ ಸಂತೋಷ ವ್ಯಕ್ತಪಡಿಸಿದೆ.
|