ಮೂರು ತಿಂಗಳೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕೆಂದು ಚುನಾವಣೆ ಆಯೋಗ ಮತ್ತು ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ನಡೆಸಿದ ವಿಚಾರಣೆಯಲ್ಲಿ, ರಾಜ್ಯದಲ್ಲಿ ಈಗ ಚುನಾವಣೆಗೆ ಪೂರಕ ವಾತಾವರಣವಿದೆ. ಮಹಾನಗರ ಪಾಲಿಕೆಗೆ ಮೂರು ತಿಂಗಳೊಳಗೆ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಆಡಳಿತವನ್ನು ಅಸ್ತಿತ್ವಕ್ಕೆ ತರಬೇಕೆಂದು ತೀರ್ಪು ನೀಡಿದೆ.
ಇದರಿಂದಾಗಿ ಅಕ್ಟೋಬರ್ ಒಳಗಾಗಿ ಪಾಲಿಕೆ ಚುನಾವಣೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.
|