ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾರಿ ಮುಷ್ಕರ,ಬಂದ್‌ನಿಂದ ಕಂಗೆಟ್ಟ ಜನತೆ  Search similar articles
ಒಂದು ಕಡೆ ಲಾರಿ ಮುಷ್ಕರ ಇನ್ನೊಂದೆಡೆ ವಿಶ್ವಹಿಂದೂ ಪರಿಷತ್ ಕರೆಕೊಟ್ಟಿರುವ ಬಂದ್‌ನಿಂದಾಗಿ ರಾಜ್ಯದೆಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಎರಡನೇ ದಿನಕ್ಕೆ ಕಾಲಿಟ್ಟಿರುವ ಲಾರಿ ಮುಷ್ಕರದಿಂದಾಗಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೀವ್ರ ಪರಿಣಾಮ ಉಂಟಾಗಿದೆ. ರಾಜ್ಯಕ್ಕೆ ಬರಬೇಕಾದ ಸರಕು ಹಾಗೂ ವಾಣಿಜ್ಯ ಉದ್ದೇಶದ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ದಿನಬಳಕೆಯ ವಸ್ತುಗಳು ಗಗನಕ್ಕೇರಿದ್ದು, ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ನಡುವೆ ರಾಜ್ಯದಲ್ಲಿ ಬೆಳೆದ ತರಕಾರಿ ಹೊರ ರಾಜ್ಯಗಳಿಗೆ ಸಾಗಾಟ ಮಾಡಲಾಗದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಲದೆ, ಸೂಕ್ತ ಮಾರುಕಟ್ಟೆ ದೊರೆಯದೆ ತರಕಾರಿಗಳು ಕೊಳೆಯಲಾರಂಭಿಸಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದೇ ವೇಳೆ ಅಮರನಾಥ ದೇಗುಲಕ್ಕೆ ನೀಡಲಾಗಿದ್ದ ಜಮೀನನ್ನು ಜಮ್ಮು ಕಾಶ್ಮೀರ ಸರಕಾರ ವಾಪಾಸ್ ಪಡೆದಿರುವುದನ್ನು ವಿರೋಧಿಸಿ ದೇಶದೆಲ್ಲೆಡೆ ವಿಶ್ವ ಹಿಂದೂ ಪರಿಷತ್ ಕರೆನೀಡಿರುವ ಬಂದ್‌ನಿಂದಾಗಿ ಮತ್ತೆ ಜನತೆ ಪರದಾಡುವಂತಾಗಿದೆ. ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಸಾರ್ವಜನಿಕರು ಅಗತ್ಯ ವಸ್ತುಗಳ ಕೊರತೆ ಅನುಭವಿಸಿದರು. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ಜನಸಾಮಾನ್ಯ ತತ್ತರಿಸಿಹೋಗಿದ್ದಾನೆ.
ಮತ್ತಷ್ಟು
ಹೈಕೋರ್ಟ್ ತೀರ್ಪು: ಮೇಲ್ಮನವಿಗೆ ಕರವೇ ನಿರ್ಧಾರ
ಜೆಡಿಎಸ್ ಪ್ರಗತಿ ಯೋಜನೆಗೆ ಬಿಜೆಪಿ ತಡೆ: ರೇವಣ್ಣ
ಹಿಂಸಾರೂಪ ತಾಳಿದ ಭಾರತ ಬಂದ್
ಕುತೂಹಲ ಮೂಡಿಸಿದ ದೇವೇಗೌಡ-ಪಾಟೀಲ್ ಭೇಟಿ
ಲಾರಿ ಮುಷ್ಕರ: ಮಾತುಕತೆಗೆ ಮುಂದಾಗಲು ಮನವಿ
ಕನ್ನಡ ಕಡ್ಡಾಯ ಅನಗತ್ಯ: ಹೈಕೋರ್ಟ್ ತೀರ್ಪಿಗೆ ವಿರೋಧ