ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಯುವಕ ಹಾಗೂ ಇಬ್ಬರು ವಿದೇಶಿ ಮಹಿಳೆಯರನ್ನು ಅಬಕಾರಿ ಮತ್ತು ಸುಂಕ ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರಿಂದ 10ಕೋಟಿ ರೂ. ಮೌಲ್ಯದ 3 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಯುವತಿಯರು ಥಾಯ್ಲೆಂಡ್ ಮತ್ತು ವೆನಿಜುಲಾ ಮೂಲದವರೆಂದು ಗುರುತಿಸಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಯುವಕ ದೇಹದ ಒಳಗೆ ಶಸ್ತ್ರ ಚಿಕಿತ್ಸೆ ಮಾಡಿಸಿ, ಕ್ಯಾಪ್ಸುಲ್‌ಗಳನ್ನು ಅಡಗಿಸಿಟ್ಟಿದ್ದ. ಕ್ಯಾಪ್ಸುಲ್‌ಗಳಲ್ಲಿ ಹೆರಾಯಿನ್ ತುಂಬಲಾಗಿತ್ತು. ಅಂತೆಯೇ ಮಹಿಳೆ ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ಹೆರಾಯಿನ್ ತುಂಬಿದ ಕ್ಯಾಪ್ಸುಲ್‌ಗಳನ್ನು ಇಟ್ಟುಕೊಂಡಿದ್ದಳು.
ಬೆಂಗಳೂರಿನಿಂದ ಕೌಲಲಂಪುರಕ್ಕೆ ತೆರಳುವ ವಿಮಾನದಲ್ಲಿ ಈ ಮೂವರು ಪ್ರಯಾಣಿಸಲು ಯತ್ನಿಸಿದ ಸಂದರ್ಭದಲ್ಲಿ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಹೆರಾಯಿನ್ ಇರುವುದು ಕಂಡು ಬಂತು. ಕೂಡಲೇ ಅಧಿಕಾರಿ ತಪಾಸಣೆ ನಡೆಸಿ ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
|