ರಾಜ್ಯದಲ್ಲಿ ಪೆಟ್ರೋಲ್ ಕೊರತೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹರತಾಳ್ ಹಾಲಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೆಟ್ರೋಲ್ ಅಭಾವ ಇದೆ ಎಂದು ಗ್ರಾಹಕರು ಆತಂಕ ಪಡಬೇಕಿಲ್ಲ. ಕೆಲವು ಪೆಟ್ರೋಲ್ ಬಂಕ್‌ಗಳ ಮುಂದೆ `ಪೆಟ್ರೋಲ್ ಸ್ಟಾಕ್ ಇಲ್ಲ' ಎಂಬ ಬೋರ್ಡ್ ಹಾಕಲಾಗಿದೆ ಅಂದ ಮಾತ್ರಕ್ಕೆ ಇಡೀ ರಾಜ್ಯದಲ್ಲಿ ಪೆಟ್ರೋಲ್ ಅಭಾವವಿದೆ ಎಂದರ್ಥವಲ್ಲ. ಕಾರಣಾಂತರಗಳಿಂದ ಅಲ್ಲಿ ಈ ರೀತಿ ಬೋರ್ಡ್ ಹಾಕಿರಬಹುದು ಎಂದರು.
ಪೆಟ್ರೋಲ್ ಅಭಾವ ಇದೆ ಎಂದು ಮುಗಿಬಿದ್ದು ಪೆಟ್ರೋಲ್ ಖರೀದಿಗೆ ತೊಡಗುವುದು ಬೇಡ. ಇದರಿಂದ ಕೃತಕ ಅಭಾವ ಸೃಷ್ಟಿಯಾಗಬಹುದು. ಮತ್ತು ಬ್ರಾಂಡೆಡ್ ಪೆಟ್ರೋಲೇ ಬಳಸಬೇಕೆಂಬ ಯಾವ ನಿಯಮವೂ ಇಲ್ಲವೆಂದು ಸಚಿವರು ತಿಳಿಸಿದರು.
|