ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ:ಯಡಿಯೂರಪ್ಪ  Search similar articles
ಕರ್ನಾಟಕದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ದಿಲ್ಲಿಗೆ ಹೋಗಿ ನಾನು ಅವಮಾನ ಅನುಭವಿಸಬೇಕಾಯಿತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವುಕರಾಗಿ ನುಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ದೆಹಲಿಗೆ ತೆರಳಿದ ಸಂದರ್ಭವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಕರ್ನಾಟಕದ ಅಹವಾಲನ್ನು ಅಷ್ಟಾಗಿ ಪರಿಗಣಿಸದೆ ತಾತ್ಸಾರ ತಾಳಿದೆ. ಅಲ್ಲಿಗೆ ತೆರಳಿದ ನಿಯೋಗ ಬರಿಗೈಲಿ ಬರಬೇಕಾಯಿತು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಮೇಲೆ ಹರಿಹಾಯ್ದ ಅವರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಸದೊಂದು ಮೈಲುಗಲ್ಲನ್ನು ಪ್ರತಿಪಕ್ಷದವರು ನೆಟ್ಟಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ದಿ, ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಇಷ್ಟವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರುತ್ತಿದ್ದಂತೆ ಸರಕಾರದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನನ್ನ ವಿರುದ್ಧ ರೈತರನ್ನೇ ಎತ್ತಿಕಟ್ಟಿ ಅವಮಾನಿಸುವ ಯತ್ನಕ್ಕೂ ಕೆಲವರೂ ಕೈಹಾಕಿದ್ದಾರೆ. ಎಲ್ಲದಕ್ಕೂ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಇಷ್ಟರಲ್ಲಿಯೇ ಅಂಥ ಮುಖಗಳನ್ನು ಬಹಿರಂಗ ಮಾಡಲಾಗುವುದು ಎಂದು ಹೇಳಿದರು.

ಸೇಡಿನ ರಾಜಕಾರಣ ಬಿಟ್ಟು ಅಭಿವೃದ್ದಿಗೆ ಕೈಜೋಡಿಸಿ ಎಂದು ಅವರು ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
ಮತ್ತಷ್ಟು
ಪೆಟ್ರೋಲ್ ಕೊರತೆ ಇಲ್ಲ: ಹರತಾಳ್ ಹಾಲಪ್ಪ
ಕೇಂದ್ರಕ್ಕೆ ನಿಯೋಗ: ಇದೀಗ ಕಾಂಗ್ರೆಸ್ ಸರದಿ
ಪೈರಸಿ ವಿರುದ್ಧ ಗೂಂಡಾ ಕಾಯ್ದೆ: ಜಯಮಾಲ ಆಗ್ರಹ
ಅತುಲ್ ರಾವ್ ಮಂಗಳೂರು ಜೈಲಿಗೆ ಸ್ಥಳಾಂತರ
ಪಾಲಿಕೆ ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ
ಉದ್ಘಾಟನೆಗೊಂಡ ಹೈಕೋರ್ಟ್ ಸಂಚಾರಿ ಪೀಠ