ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೌಡ ಕುಟುಂಬ ಜೈಲಿಗೆ: ರೆಡ್ಡಿ ಭವಿಷ್ಯ  Search similar articles
ಬಳ್ಳಾರಿ ಗಣಿ ಲಂಚ ಪ್ರಕರಣ ಈಗ ಮತ್ತೆ ಸದ್ದು ಮಾಡಿದೆ. ಗಣಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಿ ಎಂದು ಇತ್ತೀಚೆಗಷ್ಟೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಮುಖ್ಯಮಂತ್ರಿಯಾಗಿದ್ದಾಗ ಗಣಿ ಲಂಚ ಹಗರಣದ ಕುರಿತು ತನಿಖೆ ನಡೆಸಲು ಹಿಂಜರಿದ ಕುಮಾರಸ್ವಾಮಿ ಅವರಿಗೆ ಆ ಸಂದರ್ಭದಲ್ಲಿ ಹಗರಣದ ಕುರಿತು ಭಯ ಆವರಿಸಿತ್ತು. ಆದರೆ ಈಗ ಏಕಾಏಕಿ ತನಿಖೆಗೆ ಒತ್ತಾಯಿಸಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಈ ಹಗರಣದ ಕುರಿತು ಸತ್ಯಾಂಶ ಬೇಕಿದ್ದರೆ ಅವರು ಅಧಿಕಾರದಲ್ಲಿದ್ದಾಗಲೇ ಮಾಡಬೇಕಿತ್ತು. ಒಂದು ವೇಳೆ ಈಗ ಲಂಚ ಹಗರಣದ ಕುರಿತು ಸಮಗ್ರ ತನಿಖೆ ನಡೆಸಿದರೆ, ಗೌಡರ ಕುಟುಂಬ ಜೈಲಿಗೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ರೆಡ್ಡಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ, ಸರಕಾರ ಬಿಜೆಪಿ ಕೈಯಲ್ಲಿದೆ. ಅಲ್ಲದೆ, ಮೂರು ಬಳ್ಳಾರಿ ಶಾಸಕರು ಸಚಿವರಾಗಿದ್ದಾರೆ. ಈ ನಿಟ್ಟಿನಲ್ಲಿ ಗಣಿ ಲಂಚ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದಾಗಲೇ ನಡೆಸಿರುವ ವರದಿ ಈಗಾಗಲೇ ರಾಜ್ಯಪಾಲರ ಬಳಿ ಇದೆ. ಆದರೆ ಹೊಸ ಸರಕಾರ ಬಂದ ಬಳಿಕ ಅದು ಮೂಲೆಗುಂಪಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ ಅವರು, ಸದನದಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಲಾಗುವುದು ಎಂದಿದ್ದಾರೆ.
ಮತ್ತಷ್ಟು
ಚುನಾವಣೆಗೆ ಸಜ್ಜಾಗಲು ಜೆಡಿಎಸ್ ಕಾರ್ಯತಂತ್ರ
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ:ಯಡಿಯೂರಪ್ಪ
ಪೆಟ್ರೋಲ್ ಕೊರತೆ ಇಲ್ಲ: ಹರತಾಳ್ ಹಾಲಪ್ಪ
ಕೇಂದ್ರಕ್ಕೆ ನಿಯೋಗ: ಇದೀಗ ಕಾಂಗ್ರೆಸ್ ಸರದಿ
ಪೈರಸಿ ವಿರುದ್ಧ ಗೂಂಡಾ ಕಾಯ್ದೆ: ಜಯಮಾಲ ಆಗ್ರಹ
ಅತುಲ್ ರಾವ್ ಮಂಗಳೂರು ಜೈಲಿಗೆ ಸ್ಥಳಾಂತರ