ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜು.7ರಂದು ಕರವೇ ಪ್ರತಿಭಟನೆ  Search similar articles
ಭಾಷಾ ಮಾಧ್ಯಮದ ಕುರಿತು ಹೈಕೋರ್ಟ್ ತೀರ್ಪು, ಹೊಗೇನಕಲ್ ಯೋಜನೆ ವಿವಾದ ಸೇರಿದಂತೆ ಹಲವು ವಿಚಾರಗಳ ಕುರಿತು ರಾಜ್ಯ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸೋಮವಾರದಂದು ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಬೃಹತ್ ಪ್ರತಿಭಟನೆ ರ‌್ಯಾಲಿಯನ್ನು ನಡೆಸಲು ಉದ್ದೇಶಿಸಿದೆ.

ಈ ಬಗ್ಗೆ ಶನಿವಾರ ನಗರದಲ್ಲಿ ವೇದಿಕೆ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ನೆಲ, ಜಲ ಹಾಗೂ ಗಡಿ ವಿಚಾರದಲ್ಲಿ ಕರವೇ ಕಳೆದ ಕೆಲವು ವರ್ಷಗಳಿಂದ ಸರಕಾರವನ್ನು ಎಚ್ಚರಿಸುತ್ತಿದೆ. ಈಗ ಭಾಷಾ ಮಾಧ್ಯಮದ ಕುರಿತು ಸರಕಾರ ನಿಲುವು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿ ಕರವೇ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಭಾಷಾ ಮಾಧ್ಯಮದ ಬಗ್ಗೆ ರಾಜ್ಯ ಸರಕಾರ ಸುಗ್ರಿವಾಜ್ಞೆ ಹೊರಡಿಸಿ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಅವರು ಇದೇ ಸಂದರ್ಭದಲ್ಲಿ ಸರಕಾರವನ್ನು ಆಗ್ರಹಿಸಿದರು.

ಅಲ್ಲದೆ, ತಮಿಳು ನಾಡು ಸರಕಾರ ಹೊಗೇನಕಲ್ ಯೋಜನೆಯನ್ನು ಮುಂದುವರೆಸುವ ಕ್ರಮಕ್ಕೆ ರಾಜ್ಯ ಸರಕಾರ ತಡೆ ನೀಡಬೇಕು. ಹಾಗೆಯೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವ ಕುರಿತು ಸರಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಮತ್ತಷ್ಟು
ಗೌಡ ಕುಟುಂಬ ಜೈಲಿಗೆ: ರೆಡ್ಡಿ ಭವಿಷ್ಯ
ಚುನಾವಣೆಗೆ ಸಜ್ಜಾಗಲು ಜೆಡಿಎಸ್ ಕಾರ್ಯತಂತ್ರ
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ:ಯಡಿಯೂರಪ್ಪ
ಪೆಟ್ರೋಲ್ ಕೊರತೆ ಇಲ್ಲ: ಹರತಾಳ್ ಹಾಲಪ್ಪ
ಕೇಂದ್ರಕ್ಕೆ ನಿಯೋಗ: ಇದೀಗ ಕಾಂಗ್ರೆಸ್ ಸರದಿ
ಪೈರಸಿ ವಿರುದ್ಧ ಗೂಂಡಾ ಕಾಯ್ದೆ: ಜಯಮಾಲ ಆಗ್ರಹ