ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಲ್ಬರ್ಗಾದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭ  Search similar articles
ಹೈದರಬಾದ್-ಕರ್ನಾಟಕ ಜನತೆಯ ಪಾಲಿಗೆ ಇಂದು(ಶನಿವಾರ) ಸುದಿನ. ಬಹುದಿನಗಳ ಕನಸು ನನಸಾದ ಸಂತಸದ ಭಾವ ಅವರ ಮುಖದಲ್ಲಿತ್ತು. ಇಂದು ಗುಲ್ಬರ್ಗಾ ಹೈಕೋರ್ಟ್ ಸಂಚಾರಿ ಪೀಠ ಉದ್ಘಾಟನೆಗೊಳ್ಳುತ್ತಿದ್ದಂತೆ ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬಂದಿತು.

ನೂತನ ಹೈಕೋರ್ಟ್ ಸಂಚಾರಿ ಪೀಠವನ್ನು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶ ಡಾ| ಕೆ.ಜಿ. ಬಾಲಕೃಷ್ಣನ್ ಉದ್ಘಾಟಿಸಿದರು. ಈ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದಶಕಗಳ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ವಕೀಲರು ಹರ್ಷಚಿತ್ತರಾಗಿ ವಿಜಯೋತ್ಸವ ಆಚರಿಸಿದರು. ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿದ ವಕೀಲರ ಸಂಭ್ರಮ ಮುಗಿಲು ಮುಟ್ಟಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಧಾರವಾಡ ವಕೀಲ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ಸಂಚಾರಿ ಪೀಠವನ್ನು ಖಾಯಂ ಪೀಠವನ್ನಾಗಿ ಮಾಡುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಕಪ್ಪುಚುಕ್ಕೆ:
ಗುಲ್ಬರ್ಗಾ ಹೈಕೋರ್ಟ್ ಸಂಚಾರಿ ಪೀಠ ಉದ್ಘಾಟನೆ ಸಂದರ್ಭದಲ್ಲಿ ಎಸ್ಟಿ/ಎಸ್ಸಿ ನಿರುದ್ಯೋಗಿ ಇಂಜಿನಿಯರ್‌ಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಬ್ಯಾಕ್‌ಲಾಗ್ ಹುದ್ದೆಯನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಕಾರರು ನ್ಯಾಯಮೂರ್ತಿ ಹಾಗೂ ಸಮಾರಂಭಕ್ಕಾಗಮಿಸಿದ ಗಣ್ಯರ ಮೇಲೆ ಕರಪತ್ರಗಳನ್ನು ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯು ಸಮಾರಂಭಕ್ಕೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ಕೂಡಲೇ ಪ್ರತಿಭಟನೆಕಾರರನ್ನು ಪೊಲೀಸರು ಬಂಧಿಸಿ ಸಮಾರಂಭವನ್ನು ಶಾಂತ ರೀತಿಯಲ್ಲಿ ನಡೆಸುವಂತೆ ಅನುವು ಮಾಡಿಕೊಟ್ಟರು.
ಮತ್ತಷ್ಟು
ಜು.7ರಂದು ಕರವೇ ಪ್ರತಿಭಟನೆ
ಗೌಡ ಕುಟುಂಬ ಜೈಲಿಗೆ: ರೆಡ್ಡಿ ಭವಿಷ್ಯ
ಚುನಾವಣೆಗೆ ಸಜ್ಜಾಗಲು ಜೆಡಿಎಸ್ ಕಾರ್ಯತಂತ್ರ
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ:ಯಡಿಯೂರಪ್ಪ
ಪೆಟ್ರೋಲ್ ಕೊರತೆ ಇಲ್ಲ: ಹರತಾಳ್ ಹಾಲಪ್ಪ
ಕೇಂದ್ರಕ್ಕೆ ನಿಯೋಗ: ಇದೀಗ ಕಾಂಗ್ರೆಸ್ ಸರದಿ