ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಂಕಿತ ಎಲ್‌ಟಿಟಿಇ ಸದಸ್ಯನ ಬಂಧನ  Search similar articles
ನಕಲಿ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಪ್ರಯಾಣ ಬೆಳೆಸಲು ಯತ್ನಿಸಿದ ಎಲ್‌ಟಿಟಿಇ ಶಂಕಿತ ಸದಸ್ಯನೊಬ್ಬನನ್ನು ಬಿಇಎಎಲ್‌ನ ವಲಸೆ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಶಶಿಶೇಖರನ್ ಅಲಿಯಾಸ್ ನಟರಾಜನ್ ಶಶಿಕರಣ ಎಂಬಾತನನ್ನು ಬಂಧಿಸಿ ನಕಲಿ ಪಾಸ್ ಪೋರ್ಟ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಶ್ರೀಲಂಕಾದ ಜಾಫ್ನಾ ನಗರದ ನಿವಾಸಿಯಾಗಿದ್ದು, ಎಲ್‌ಟಿಟಿಇ ಜೊತೆ ನೇರ ಸಂಪರ್ಕ ಹೊಂದಿದ್ದಾನೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.

ಬಾಣಸವಾಡಿಯ ರಾಜೇಶ್ ನಿಹಾಲ್ ಎಂಬುವವರ ಪಾಸ್ ಪೋರ್ಟ್‌ನಲ್ಲಿ ತನ್ನ ಪೋಟೋ ಅಂಟಿಸಿಕೊಂಡು ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ತೆರಳಲು ಸಜ್ಜಾಗಿದ್ದ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ನಗರದಲ್ಲಿ ಎಲ್‌ಟಿಟಿಇ ಶಂಕಿತ ಉಗ್ರರು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಈತನಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಮತ್ತಷ್ಟು
ಗುಲ್ಬರ್ಗಾದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭ
ಜು.7ರಂದು ಕರವೇ ಪ್ರತಿಭಟನೆ
ಗೌಡ ಕುಟುಂಬ ಜೈಲಿಗೆ: ರೆಡ್ಡಿ ಭವಿಷ್ಯ
ಚುನಾವಣೆಗೆ ಸಜ್ಜಾಗಲು ಜೆಡಿಎಸ್ ಕಾರ್ಯತಂತ್ರ
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ:ಯಡಿಯೂರಪ್ಪ
ಪೆಟ್ರೋಲ್ ಕೊರತೆ ಇಲ್ಲ: ಹರತಾಳ್ ಹಾಲಪ್ಪ