ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
600 ಮಾತ್ರೆ ನುಂಗಿದರೂ ಚಿಕೂನ್ ಗುನ್ಯಾ ಬಿಡಲಿಲ್ಲ!  Search similar articles
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಚಿಕೂನ್ ಗುನ್ಯಾದ್ದೇ ಕಾರುಬಾರು. ಪ್ರತಿಮನೆಯಲ್ಲೂ ಇಬ್ಬರಾದರೂ ಚಿಕೂನ್ ಗುನ್ಯಾಕ್ಕೆ ತುತ್ತಾಗಿರುವುದು ಸಾರ್ವಜನಿಕರಲ್ಲಿ ಸಹಜವಾಗಿ ಆತಂಕ ಮೂಡಿಸಿದೆ.

ಚಿಕೂನ್ ಗುನ್ಯಾಕ್ಕೆ ಹೆದರಿದ ಮಹಾಶಯನೊಬ್ಬ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 600 ಮಾತ್ರೆಗಳನ್ನು ನುಂಗಿರುವ ಸ್ವಾರಸ್ಯಕರ ಘಟನೆ ಸುಳ್ಯದಲ್ಲಿ ನಡೆದಿದೆ. ರೋಗ ನಿರೋಧಕ ಔಷಧಗಳನ್ನು ಸೇವಿಸಿದರೆ ಚಿಕೂನ್ ಗುನ್ಯಾದಿಂದ ದೂರವಿರಬಹುದೆಂಬ ಮಾಹಿತಿಯಂತೆ ಈತ ದಿನವೊಂದಕ್ಕೆ 40 ಮಾತ್ರೆಗಳನ್ನು ಸೇವಿಸಿದ್ದಾನೆ.

ಇಷ್ಟೆಲ್ಲಾ ಮಾಡಿದರೂ ಚಿಕೂನ್ ಗುನ್ಯಾ ಮಾತ್ರ ಆತನನ್ನು ಬಿಡಲಿಲ್ಲ. ಇದೀಗ ಗುನ್ಯಾದಿಂದ ಬಳಲಿ ಬೆಂಡಾಗಿರುವ ಈತನ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಇತ್ತೀಚೆಗೆ ಚಿಕೂನ್ ಗುನ್ಯಾ ಕಾಯಿಲೆಗೆ ನಿಯೋಜಿತರಾಗಿರುವ ವೈದ್ಯರು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಇಷ್ಟು ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸಿದರೂ, ಯಾವುದೇ ಸೈಡ್ ಎಫೆಕ್ಟ್ ಆಗದಿರುವ ಬಗ್ಗೆ ಸ್ವತಃ ವೈದ್ಯರೇ ಆಶ್ಚರ್ಯಗೊಂಡಿದ್ದಾರಂತೆ. ಅಂತೂ ಈ ಚಿಕೂನ್ ಗುನ್ಯಾ ಯಾವೆಲ್ಲಾ ಸಮಸ್ಯೆಗಳನ್ನು ತಂದೊಡ್ಡಿತು ಎನ್ನುವುದಕ್ಕೆ ಇದೇ ಉದಾಹರಣೆ.
ಮತ್ತಷ್ಟು
ಚುನಾವಣೆಗೆ ಸಜ್ಜಾಗಿ: ಕಾರ್ಯಕರ್ತರಿಗೆ ವೆಂಕಯ್ಯ
ಸಿಂಧ್ಯಾ: ಕಮಲಕ್ಕೆ ಮತ್ತೊಂದು ದಳ ಸೇರ್ಪಡೆ?
ಬಿಬಿಎಂಪಿ ಚುನಾವಣೆಗೆ ಬಿಜೆಪಿಯಿಂದ ಭರದ ಸಿದ್ಧತೆ
ಶಂಕಿತ ಎಲ್‌ಟಿಟಿಇ ಸದಸ್ಯನ ಬಂಧನ
ಗುಲ್ಬರ್ಗಾದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭ
ಜು.7ರಂದು ಕರವೇ ಪ್ರತಿಭಟನೆ