ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್, ಜೆಡಿಎಸ್‌ನ ನಾಲ್ವರು ಶಾಸಕರು ಬಿಜೆಪಿಗೆ  Search similar articles
ಕಳೆದ ಕೆಲವು ದಿನಗಳಿಂದ ವದಂತಿಗೆ ಎಡೆಮಾಡಿಕೊಟ್ಟಿದ್ದ ಶಾಸಕರ ರಾಜೀನಾಮೆ ಕೊನೆಗೂ ನಿಜವಾಗಿದೆ. ಜೆಡಿಎಸ್ ಎರಡು ಶಾಸಕರು ಹಾಗೂ ಕಾಂಗ್ರೆಸ್‌ನ ಒಬ್ಬರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಜೆಡಿಎಸ್ ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ಹಾಗೂ ಕಾಂಗ್ರೆಸ್‌ನ ಆನಂದ್ ಅಸ್ನೋಟಿಕರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರು ಶಾಸಕರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಮೂವರು ಶಾಸಕರನ್ನು ಪಕ್ಷಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನಡೆಸಿದ ಮಾತುಕತೆಯಿಂದಾಗಿ ಈ ಮಹತ್ವದ ರಾಜಕೀಯ ಬೆಳವಣಿಗೆ ಕಂಡು ಬಂದಿದೆ. ಶ್ರೀರಾಮುಲು ನಿವಾಸದಲ್ಲಿ ಈ ಮೂವರು ಶಾಸಕರು ದಿಢೀರನೆ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಬಳಿಕ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿ ನೇರವಾಗಿ ಶ್ರೀರಾಮುಲು ಅವರೊಂದಿಗೆ ಆಗಮಿಸಿದ ಶಾಸಕರು ಕಾರ್ಯಕರ್ತರ ಹಾಗೂ ಬೆಂಬಲಿಗರ ಒತ್ತಾಸೆಯ ಮೇರೆಗೆ ಬಿಜೆಪಿ ಸೇರಿದ್ದೇವೆ. ಬಿಜೆಪಿ ಅಭ್ಯರ್ಥಿಗಳಾಗಿ ಉಪಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಈ ನಡುವೆ ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಇನ್ನೊರ್ವ ಶಾಸಕ ಜೆ. ನರಸಿಂಹ ಸ್ವಾಮಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮತ್ತಷ್ಟು
600 ಮಾತ್ರೆ ನುಂಗಿದರೂ ಚಿಕೂನ್ ಗುನ್ಯಾ ಬಿಡಲಿಲ್ಲ!
ಚುನಾವಣೆಗೆ ಸಜ್ಜಾಗಿ: ಕಾರ್ಯಕರ್ತರಿಗೆ ವೆಂಕಯ್ಯ
ಸಿಂಧ್ಯಾ: ಕಮಲಕ್ಕೆ ಮತ್ತೊಂದು ದಳ ಸೇರ್ಪಡೆ?
ಬಿಬಿಎಂಪಿ ಚುನಾವಣೆಗೆ ಬಿಜೆಪಿಯಿಂದ ಭರದ ಸಿದ್ಧತೆ
ಶಂಕಿತ ಎಲ್‌ಟಿಟಿಇ ಸದಸ್ಯನ ಬಂಧನ
ಗುಲ್ಬರ್ಗಾದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭ