ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆ.29ರಿಂದ ಅಕ್ಕ ವಿಶ್ವ ಕನ್ನಡ ಸಮ್ಮೇಳನ  Search similar articles
ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಆಯೋಜಿಸಿರುವ ಐದನೇ ವಿಶ್ವ ಕನ್ನಡ ಸಮ್ಮೇಳನ ಅಗಸ್ಟ್ 29ರಿಂದ ಮೂರು ದಿನಗಳ ಕಾಲ ಅಮೆರಿಕಾದ ಚಿಕಾಗೊ ನಗರದಲ್ಲಿ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಕ್ಕ ಅಧ್ಯಕ್ಷ ರಮೇಶ್ ಗೌಡ, ವಿದ್ಯಾರಣ್ಯ ಕೂಟದ ಆಶ್ರಯದಲ್ಲಿ ನಡೆಯುವ ಸಮ್ಮೇಳನದಲ್ಲಿ ವಿಶ್ವ ಕನ್ನಡಿಗರ ಪ್ರತಿಭೆ ಮತ್ತು ಪರಂಪರೆಯ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಕನ್ನಡಿಗರಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರವೇರಿಸಲಿದ್ದಾರೆ. ಗಾಯಕ ಸಿ. ಅಶ್ವಥ್, ಗುರುಕಿರಣ್, ಸಿನಿಮಾ ನಟರು, ಹಿನ್ನೆಲೆ ಗಾಯಕರು ಸೇರಿದಂತೆ ಹಲವು ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ನಾಗಾಭರಣ ಅವರ ತಂಡ ಜೋಕುಮಾರಸ್ವಾಮಿ ನಾಟಕ ಪ್ರದರ್ಶಿಸಲಿದೆ. ಅಲ್ಲದೆ, ಅನೇಕ ಕಾರ್ಯಕ್ರಮಗಳನ್ನು ಕೂಟ ಹಮ್ಮಿಕೊಳ್ಳಲಾಗಿದೆ.
ಮತ್ತಷ್ಟು
ಅತುಲ್ ಬಂಧನದಲ್ಲಿ ರಾಜಕೀಯ ಕೈವಾಡ: ಮೀರಾರಾವ್
ರಾಜೀವ್‌ಗಾಂಧಿ ವಿವಿ ಸ್ಥಳಾಂತರ ಇಲ್ಲ: ಯಡಿಯೂರಪ್ಪ
ಗೋಲಿಬಾರ್: ಗಾಯಗೊಂಡ ಪುಟ್ಟಪ್ಪ ಹೊನ್ನತ್ತಿ ನಿಧನ
ಗುರುವಾರ ಸಚಿವ ಸಂಪುಟ ವಿಸ್ತರಣೆ
ವಿವಿ ಸ್ಥಳಾಂತರ: ಸರಕಾರದ ವಿರುದ್ಧ ಆಕ್ರೋಶ
ಗಣಿಗಾರಿಕೆ ಶೀಘ್ರ ರಾಷ್ಟ್ರೀಕರಣಕ್ಕೆ ಸಿಎಂ ಒತ್ತಾಯ