ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದರಾಮಯ್ಯರಿಂದ ಹೊಸ ಪಕ್ಷ?  Search similar articles
NRB
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸೇರುತ್ತಾರೆ ಎಂಬ ನೀರೀಕ್ಷೆಯ ನಡುವೆಯೇ ಅವರು ಹೊಸ ಪಕ್ಷ ಕಟ್ಟುವ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

ಯಾರ 'ಕೈ'ಗೂ ಸಿಗದೇ ಮಾರಿಷ್‌ಗೆ ಪಲಾಯನ ಮಾಡಿರುವ ಸಿದ್ದರಾಮಯ್ಯ ಅವರ ನಡೆ ಅವರು ಬಿಜೆಪಿ ಸೇರಬಹುದು ಎಂಬ ಊಹೆಗೆ ಇಂಬು ನೀಡಿತ್ತು. ಆದರೆ ಹೊಸ ಪಕ್ಷ ಕಟ್ಟುವ ಸುದ್ದಿ ರಾಜ್ಯದ ರಾಜಕಾರಣಿಗಳ ಕಿವಿ ನೆಟ್ಟಗಾಗುವಂತೆ ಮಾಡಿದೆ.

ಒಂದೆಡೆ ಗಣಿ ಧಣಿಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯುತ್ತಿದ್ದರೆ, ಸಿದ್ದರಾಮಯ್ಯನವರ ಕುರಿತ ಈ ಹೊಸ ವಿಚಾರ ರಾಜ್ಯದ ಜನತೆಯನ್ನು ಮತ್ತಷ್ಟು ಕುತೂಹಲಕ್ಕೆ ತಳ್ಳಿದೆ.

ಮಾರಿಷ್‌ಗೆ ತೆರಳಿರುವ ಸಿದ್ದರಾಮಯ್ಯ ಅಲ್ಲಿ ಹೊಸ ಪಕ್ಷ ಕಟ್ಟುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಹೊಸ ಪಕ್ಷಕ್ಕೆ ಕರ್ನಾಟಕ ಜನತಾ ಪಕ್ಷ ಎಂದು ಹೆಸರಿಡಲು ಪರೀಶೀಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಪೂರಕವಾಗಿ ಮೊದಲ ಅಹಿಂದ ಸಮಾವೇಶವನ್ನು ಮರುಸಂಘಟಿಸುವತ್ತ ಗಮನ ಹರಿಸಲು ತಂತ್ರ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಎಸ್ಪಿ ಬೆಂಬಲ ಅಧಿಕಾರಕ್ಕಾಗಿ: ಖರ್ಗೆ
ಆ.29ರಿಂದ ಅಕ್ಕ ವಿಶ್ವ ಕನ್ನಡ ಸಮ್ಮೇಳನ
ಅತುಲ್ ಬಂಧನದಲ್ಲಿ ರಾಜಕೀಯ ಕೈವಾಡ: ಮೀರಾರಾವ್
ರಾಜೀವ್‌ಗಾಂಧಿ ವಿವಿ ಸ್ಥಳಾಂತರ ಇಲ್ಲ: ಯಡಿಯೂರಪ್ಪ
ಗೋಲಿಬಾರ್: ಗಾಯಗೊಂಡ ಪುಟ್ಟಪ್ಪ ಹೊನ್ನತ್ತಿ ನಿಧನ
ಗುರುವಾರ ಸಚಿವ ಸಂಪುಟ ವಿಸ್ತರಣೆ