ಪದ್ಮಪ್ರಿಯಾ ಸಾವಿನ ಪ್ರಕರಣದ ಪ್ರಮುಖ ಆರೋಪಿ ಇಂಜಿನಿಯರ್ ಅತುಲ್ ರಾವ್‌ಗೆ ಜುಲೈ 23ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಇಲ್ಲಿನ ನ್ಯಾಯಾಲಯ ಆದೇಶ ನೀಡಿದೆ.
ಅತುಲ್ ರಾವ್‌ಗೆ ನ್ಯಾಯಾಲಯ ವಿಧಿಸಿದ ನ್ಯಾಯಾಂಗ ಬಂಧನ ಬುಧವಾರಕ್ಕೆ ಕೊನೆಗೊಂಡಿರುವುದರಿಂದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಬಂಧನ ವಿಸ್ತರಣೆಯ ಆದೇಶ ನೀಡಿದ್ದಾರೆ. ತನಿಖೆ ಪೂರ್ಣಗೊಳ್ಳದ ಕಾರಣ ಜಾಮೀನು ನೀಡಬಾರದೆಂದು ಎರಡೂ ನ್ಯಾಯಾಲಯಗಳ ಪ್ರಾಸಿಕ್ಯೂಶನ್ ಪರ ವಕೀಲರು ತಮ್ಮ ವಾದ ಮಂಡಿಸಿದರು.
ಈ ಮಧ್ಯೆ ದೆಹಲಿ ಪೊಲೀಸರ ವರದಿ ಇನ್ನೂ ಕೂಡ ರಾಜ್ಯಕ್ಕೆ ತಲುಪಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಗಿಯಲು ಸಾಧ್ಯವಿಲ್ಲ ಎಂದು ಈಗಾಗಲೇ ತನಿಖಾಧಿಕಾರಿ ಮಣಿಪಾಲ ಇನ್ಸ್ಪೆಕ್ಟರ್ ಬಿ.ಜಿ. ಆಚಾರ್ ತಿಳಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ತಮ್ಮ ಪತಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಬಗ್ಗೆ ಆರೋಪಿಸಿರುವ ಅತುಲ್ ಪತ್ನಿ ಮೀರಾರಾವ್, ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಇತ್ತೀಚೆಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಲಯದಲ್ಲಿ ಕೋರಲಾಗಿದೆ ಎನ್ನಲಾಗಿದೆ.
|