ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸು.ಕೋ ತೀರ್ಪು: ಖೇಣಿ ಹಾದಿ 'ನೈಸ್'  Search similar articles
PTI
ನೈಸ್ ಸಂಸ್ಥೆಗೆ ಭೂಮಿ ನೀಡುವ ಸಂಬಂಧ ರಾಜ್ಯಪಾಲರು ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ವಿಭಾಗೀಯ ಪೀಠವು ಆಯೋಗದ ಅರ್ಜಿಯನ್ನು ತಳ್ಳಿಹಾಕಿದ್ದು, ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಶೀಘ್ರದಲ್ಲಿ ನೈಸ್ ಕಂಪೆನಿಗೆ ಬಾಕಿ ಇರುವಷ್ಟು ಭೂಮಿ ನೀಡುವಂತೆ ರಾಜ್ಯಪಾಲರು ಹೊರಡಿಸಿದ್ದ ಆದೇಶವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸುಪ್ರಿಂಕೋರ್ಟ್ ಮೊರೆ ಹೋಗಿತ್ತು.

ಆದರೆ ಇದನ್ನೆಲ್ಲಾ ತಳ್ಳಿ ಹಾಕಿರುವ ಸುಪ್ರಿಂಕೋರ್ಟ್, ಅಭಿವೃದ್ಧಿ ಕಾಮಗಾರಿಗೆ ಯಾವುದೇ ಕಾರಣಕ್ಕೂ ಅಡ್ಡಿ ಮಾಡಬಾರದೆಂದು ಆದೇಶದಲ್ಲಿ ತಿಳಿಸಿದೆ.

ಈ ತೀರ್ಪಿನಿಂದ ನೈಸ್ ಸಂಸ್ಥೆಗೆ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೈಸ್ ಕಂಪೆನಿ ಮಾಲೀಕ ಅಶೋಕ್ ಖೇಣಿ, ಈ ತೀರ್ಪಿನಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಜೆಡಿಎಸ್ ಮೈತ್ರಿ: ಜಾಲಪ್ಪ ಅಸಮಾಧಾನ
ಹೋಟೆಲ್ ಸಂಘದಿಂದ ಸಿಎಂಗೆ ಪತ್ರ
ಕಾಂಗ್ರೆಸ್ ತುರ್ತು ಶಾಸಕಾಂಗ ಸಭೆ
ಅತುಲ್ ನ್ಯಾಯಾಂಗ ಬಂಧನ ವಿಸ್ತರಣೆ
ಲೋಕಸಭಾ ಚುನಾವಣಾ ಕಣದಿಂದ ಅಂಬರೀಷ್ ಹಿಂದಕ್ಕೆ
ಮತ್ತೆ ಮೂವರು ಬಿಜೆಪಿಗೆ: ಕಾಂಗ್ರೆಸ್‌ನಲ್ಲಿ ತಳಮಳ