ಶಾಸಕರ ಪಕ್ಷಾಂತರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ, ತುರ್ತು ಶಾಸಕಾಂಗ ಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ಅನೇಕ ಮಹತ್ವದ ಅಂಶಗಳನ್ನು ಚರ್ಚಿಸಲಾಯಿತು.
ಪಕ್ಷ ತೊರೆದ ಶಾಸಕರ ವಿರುದ್ಧ ಸಮರ ಘೋಷಿಸುವ ಬಗ್ಗೆ ಹಾಗೂಅಂತೆಯೇ ಪಕ್ಷ ಬಿಟ್ಟ ಶಾಸಕರ ಕ್ಷೇತ್ರಗಳಲ್ಲಿ ಜನಜಾಗೃತಿ ಸಭೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ.
ಇದೇ ವೇಳೆ ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಮುಖಂಡರು, ಬಿಜೆಪಿ ರಾಜ್ಯದಲ್ಲಿ ಶಾಸಕರು ಖರೀದಿಸುವ ಮೂಲಕ ಕುದುರೆ ವ್ಯಾಪಾರ ನಡೆಸುತ್ತಿದೆ. ಈ ಬಗ್ಗೆ ಶೀಘ್ರವೇ ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ 80 ಶಾಸಕರ ಪೈಕಿ ಕೇವಲ 39 ಶಾಸಕರು ಹಾಗೂ 14 ವಿಧಾನ ಪರಿಷತ್ ಸದಸ್ಯರು ಸಭೆಗೆ ಹಾಜರಾಗಿದ್ದು, ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಸಭೆಯಲ್ಲಿ ಶಾಸಕರುಗಳಾದ ಸತೀಶ್ ಜಾರಕಿಹೊಳಿ, ಜಗ್ಗೇಶ್, ಕೆ. ವೆಂಕಟೇಶ್ ಹಾಗೂ ಕೃಷ್ಣಮೂರ್ತಿ ಭಾಗವಹಿಸಿರಲಿಲ್ಲ. ಅಲ್ಲದೆ, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮರಿಷಸ್ ಪ್ರವಾಸದಲ್ಲಿರುವುದರಿಂದ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
|