ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯನ್ನು ಆಲಂಗಿಸಿಯೇ ಬಿಟ್ಟ ಜಗ್ಗೇಶ್  Search similar articles
NRB
ಕೊನೆಗೂ ನೀರೀಕ್ಷೆ ನಿಜವಾಗಿದೆ. ಚಿತ್ರನಟ ತುರುವೇಕೆರೆ ಶಾಸಕ ಜಗ್ಗೇಶ್ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಎಲ್ಲರಂತೆ ಕಾಂಗ್ರೆಸ್ ಮೇಲೆ ಆರೋಪಗಳ ಮಳೆ ಸುರಿಸಿದ್ದಾರೆ. "ಕಾಂಗ್ರೆಸ್‌ನಲ್ಲಿ ನಾಯಕತ್ವವೇ ಇಲ್ಲ. ಅದು ಅರಾಜಕ ಪಕ್ಷ. ಕಾಂಗ್ರೆಸ್ ಪಕ್ಷ ಇನ್ನೂ 15 ವರ್ಷ ಕಳೆದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ''- ಇದು ಜಗ್ಗೇಶ್ ಅವರು ನಿನ್ನೆಯ ತನಕ ತಮ್ಮದಾಗಿದ್ದ ಪಕ್ಷವನ್ನು ಜರಿದ ಪರಿ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುರುವೇಕೆರೆ ಕ್ಷೇತ್ರವನ್ನು ಶಿಕಾರಿಪುರದಂತೆ ಅಭಿವೃದ್ದಿಪಡಿಸುವ ಭರವಸೆ ನೀಡಿದ್ದಾರೆ. ಆದ್ದರಿಂದಲೇ ನಾನು ಬಿಜೆಪಿಗೆ ಸೇರಿದ್ದೇನೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ತಮ್ಮ ಸಿನಿಮಾ ಶೈಲಿಯಲ್ಲಿ ಜಗ್ಗೇಶ್ 'ರೀಲು' ಸುತ್ತಿದ್ದಾರೆ

ಮತ್ತೆ ಸ್ಪರ್ಧೆ ಇಲ್ಲ:
ತಾವು ವಿಧಾನಸಭೆಗೆ ಮತ್ತೆ ಸ್ಪರ್ಧಿಸುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ತುಮಕೂರು ಲೋಕಸಭೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಇದರೊಂದಿಗೆ ಕಾಂಗ್ರೆಸ್‌ನ ಮೂರನೇ ವಿಕೆಟ್ ಉರುಳಿದ್ದು, ಕಾಂಗ್ರೆಸ್ ಮೇಲೆ ಗಣಿಧಣಿಗಳು ಮತ್ತೊಂದು ಸುತ್ತಿನ ಪ್ರಹಾರ ನಡೆಸಿದಂತಾಗಿದೆ.
ಮತ್ತಷ್ಟು
ಕಾಂಗ್ರೆಸ್ ಶಾಸಕಾಂಗ ಸಭೆ ಮುಕ್ತಾಯ
ಚಿಕೂನ್‌ಗುನ್ಯಾ ಪೀಡಿತರಿಗೆ ಸೂಕ್ತ ನೆರವು:ಸದಾನಂದಗೌಡ
ದೆಹಲಿಗೆ ಗೌಡರ ರಾಜಕೀಯ ಯಾತ್ರೆ
ಇಂದು ಸಂಜೆ ಯಡಿಯೂರಪ್ಪ ಸಂಪುಟ ವಿಸ್ತರಣೆ
ಅಸ್ನೋಟಿಕರ್, ಜಾರಕಿಹೊಳಿ, ನಾಯಕ್‌ರಿಗೆ ಸಚಿವ ಸ್ಥಾನ
ಸು.ಕೋ ತೀರ್ಪು: ಖೇಣಿ ಹಾದಿ 'ನೈಸ್'