ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಪಾಳಯ ಸೇರಿದ ಮೂವರು ಗುರವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ವಲಸೆಬಂದವರಲ್ಲಿ ಮೂವರಿಗೆ ಮಾತ್ರ ಅದೃಷ್ಟ ಒಲಿದಿದ್ದು, ರಾಜಭನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಪ್ರಮಾಣವಚನ ಬೋಧಿಸಿದರು. ಆನಂದ್ ಆಸ್ನೋಟಿಕರ್, ಶಿವನಗೌಡ ನಾಯಕ್ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು.
ಸಚಿವರಾದ ನಂತರ ಮಾತನಾಡಿದ ಬಾಲಂದ್ರ ಜಾರಕಿಹೊಳಿ ಅವರು, "ನಾನು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಆಡಳಿತ ಪಕ್ಷದಲ್ಲಿದ್ದರೆ ಅಭಿವೃದ್ದಿ ಸುಲಭವಾಗುತ್ತದೆ ಎಂದು ಬಿಜೆಪಿ ಸೇರಿದ್ದೇನೆ. ನಿರ್ಧಾರ ತಪ್ಪು ಎಂದಾದರೆ ಜನ ತೀರ್ಮಾನ ಕೊಡುತ್ತಾರೆ" ಎಂಬುದಾಗಿ ಪ್ರತಿಕ್ರಿಯಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಸಚಿವ ಶ್ರೀರಾಮುಲು ಮಾತನಾಡಿ, ಬಿಜೆಪಿ ಸರಕಾರ ಅಸ್ಥಿರತೆಯಲ್ಲಿ ಇರುವುದು ಸರಿಯಲ್ಲ. ಆದ್ದರಿಂದ ಪಕ್ಷದ ಬಲಪಡಿಸುವುದಕ್ಕಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದು ಖಚಿತ ಎಂದರು.
|