ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬಹುರಾಷ್ಟ್ರೀಯ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಎಂ.ಬಿ. ಪ್ರಸಾದ್(34), ಈತನ ಪತ್ನಿ ನಂದಿನಿ(28), ಶಿವರುದ್ರಪ್ಪ (66), ನಾಯಂಡಹಳ್ಳಿಯ ನಂದನ್ ಗೌಡ(44) ಮತ್ತು ನಾಗರಬಾವಿಯ ಶ್ರೀಧರ್(40) ಬಂಧಿತ ವಂಚಕರು.
ಎಂ.ಬಿ. ಪ್ರಸಾದ್, ತನ್ನ ತಂಗಿಯ ಪತಿಯಾದ ಡಾ.ಜಯದೇವ್ ಬರೆದುಕೊಟ್ಟ ಜಿಪಿಎ ಅನ್ನು ನಕಲು ಮಾಡಿ ಈ ವಂಚನೆ ಎಸಗಿದ್ದಾರೆ.
ಮೂಲ ದಾಖಲಾತಿ ಮತ್ತೊಂದು ಪ್ರತಿಯನ್ನು ಎಚ್ಎಸ್ಬಿಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳಿಗೆ ಸಲ್ಲಿಸಿದ ವಂಚಕರು, ಏರ್‌ಪೋರ್ಟ್ ರಸ್ತೆಯಲ್ಲಿ ಕೋಟ್ಯಾಂತರ ಬೆಲೆ ಬಾಳುವ ಫ್ಲಾಟ್ ಖರೀದಿಸಿದ್ದರು.
ಪ್ರಕರಣದ ಜಾಡು ಹಿಡಿದ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಬ್ಯಾಂಕಿನ ಮಾಜಿ ನೌಕರ ನಂದನ್ ಗೌಡ ಈ ವಂಚನೆಯಲ್ಲಿ ಪಾಲ್ಗೊಂಡಿರುವುದನ್ನು ಪತ್ತೆಹಚ್ಚಿ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
|