ಕೆ.ಸಿ. ಜನರಲ್ ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ.
ಪ್ಲಾಸ್ಟಿಕ್ ಕವರ್ ಮತ್ತು ಬಟ್ಟೆಗಳಿಂದ ಸುತ್ತಿಡಲಾಗಿದ್ದ ಮಗುವನ್ನು ಶೌಚಾಲಯಕ್ಕೆ ಹೋದ ಕೆಲವು ಮಹಿಳೆಯರು ಪತ್ತೆ ಹಚ್ಚಿದರು.
ಅಷ್ಟರಲ್ಲಾಗಲೇ ಮಗುವಿನ ಮೈಮೇಲೆ ಇರುವೆಗಳು ಹರಿದಾಡುತ್ತಿದ್ದರೂ, ತಕ್ಷಣ ಎಚ್ಚೆತ್ತುಕೊಂಡು ಮಗುವನ್ನು ವಶಕ್ಕೆ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಉಪಚರಿಸಿದರು.
ಒಂದು ದಿನ ಮುಂಚೆಯೇ ಮಗು ಜನಿಸಿದೆ. ಆದರೆ ಇದು ನಮ್ಮ ಆಸ್ಪತ್ರೆಯಲ್ಲಿ ಜನಿಸಿದ ಮಗು ಅಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಮಗು ಈಗ ಆರೋಗ್ಯವಾಗಿದ್ದು, ಅಪಾಯದಿಂದ ಪಾರಾಗಿದೆ.
|